ಗಾಳಿಪಟ ದಾರದಿಂದ 80 ಮಂದಿಗೆ ಗಾಯ

7

ಗಾಳಿಪಟ ದಾರದಿಂದ 80 ಮಂದಿಗೆ ಗಾಯ

Published:
Updated:

ಜೈಪುರ: ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ನಡೆಯುವ ಗಾಳಿಪಟ ಸ್ಫರ್ಧೆಗೆ ಬಳಸುವ ಮಾಂಜಾದಾರ ದಿಂದ  80 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 10 ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಂಭೀರವಾಗಿ ಗಾಯಗೊಂಡವರಿಗೆ ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯ ಜಗದೀಶ್‌ ಮೋದಿ ತಿಳಿಸಿದ್ದಾರೆ.

ಗಾಳಿಪಟದ ಮಾಂಜಾ ದಾರದಿಂದ ಸಾವಿರಕ್ಕೂ ಹೆಚ್ಚು ಹದ್ದು , ಗಿಳಿ ಹಾಗೂ ಇತರ ಪಕ್ಷಿಗಳಿಗೆ ಗಾಯವಾಗಿದೆ. ಅವುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ‘ಪಕ್ಷಿ ಚಿಕಿತ್ಸಾಲಯ’ ಹೆಸರಿನ ಮಾಲ್ವೀಯನಗರದ ಎನ್‌ಜಿಒವೊಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry