ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 121 ಕೋಟಿ ದಂಡ ಸಂಗ್ರಹಿಸಿದ ಕೇಂದ್ರ ರೈಲ್ವೆ

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ: ಟಿಕೆಟ್ ಇಲ್ಲದ ಹಾಗೂ ನಿರ್ದಿಷ್ಟ ದರ್ಜೆಯ ಟಿಕೆಟ್ ಪಡೆದು ಬೇರೆ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸಿದವರಿಂದ ಕೇಂದ್ರ ರೈಲ್ವೆ 2017ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ₹ 121.09 ಕೋಟಿ ದಂಡ ವಸೂಲಿ ಮಾಡಿದೆ.

‘ಇಷ್ಟು ಪ್ರಮಾಣದ ದಂಡ ವಸೂಲಾಗಿರುವುದು ದಾಖಲೆಯಾಗಿದೆ. ಲಗೇಜ್‌ಗೆ ಶುಲ್ಕ ಪಾವತಿಸದೇ ಇರುವುದಕ್ಕೆ ದಂಡ ವಿಧಿಸುವುದೂ ಇದರಲ್ಲಿ ಸೇರಿದೆ. 2016ರ ಇದೇ ಅವಧಿಯಲ್ಲಿ ₹ 100.53 ಕೋಟಿ ದಂಡ ಸಂಗ್ರಹಿಸಲಾಗಿತ್ತು’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

‘ಟಿಕೆಟ್ ರಹಿತ ಪ್ರಯಾಣ ನಿಯಂತ್ರಣಕ್ಕೆ ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ. ದಂಡ ವಸೂಲಾತಿ ಕೂಡ ಈ ಅಭಿಯಾನ ಒಂದು ಭಾಗ. ಟಿಕೆಟ್ ವಿತರಣಾ ಯಂತ್ರ ಮತ್ತು ಮೊಬೈಲ್ ಫೋನ್‌ಗಳ ಮೂಲಕ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ಕೇಂದ್ರ ರೈಲ್ವೆಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT