₹ 30 ಸಾವಿರದ ಗಡಿ ತಲುಪಿದ ಚಿನ್ನ

7

₹ 30 ಸಾವಿರದ ಗಡಿ ತಲುಪಿದ ಚಿನ್ನ

Published:
Updated:

ಮುಂಬೈ: ಸ್ಥಳೀಯ ಚಿನ್ನಾಭರಣ ವರ್ತಕರ ಖರೀದಿ ಆಸಕ್ತಿ ಮತ್ತು ಜಾಗತಿಕ ಪೇಟೆಯಲ್ಲಿನ ಬೆಲೆ ಏರಿಕೆಯ ಕಾರಣಕ್ಕೆ ಇಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಸೋಮವಾರದ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗಳಿಗೆ ₹ 30 ಸಾವಿರದ ಗಡಿ ತಲುಪಿತು.

ಸತತ ಎರಡನೆ ದಿನವೂ ಬೆಲೆ ಏರಿಕೆ ಕಂಡು ಬಂದಿದೆ. ಸೋಮವಾರ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ( 99.5 ಶುದ್ಧತೆ) ₹ 170ರಂತೆ ಏರಿಕೆ ಕಂಡು ₹ 30 ಸಾವಿರಕ್ಕೆ ತಲುಪಿತು.  ಶುಕ್ರವಾರದ ಅಂತ್ಯಕ್ಕೆ ಬೆಲೆ ₹ 29,830ರಷ್ಟಿತ್ತು. ಅಪರಂಜಿ ಚಿನ್ನವು (99.9 ಶುದ್ಧತೆ) ಇಷ್ಟೇ ಏರಿಕೆ ಕಂಡು ₹ 30,150ಕ್ಕೆ ತಲುಪಿತು.

ಬೆಳ್ಳಿ ಏರಿಕೆ: ಕೈಗಾರಿಕಾ ಬೇಡಿಕೆ ಹೆಚ್ಚಿದ್ದರಿಂದ ಬೆಳ್ಳಿ ಬೆಲೆಯೂ ಪ್ರತಿ ಕೆಜಿಗೆ ₹ 39 ಸಾವಿರದ ಗಡಿ ದಾಟಿತು. ಪ್ರತಿ ಕೆಜಿಗೆ ₹ 360ರಂತೆ ಏರಿಕೆ ಕಂಡು ₹ 39,210ಕ್ಕೆ ತಲುಪಿತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry