‘ಅಣ್ವಸ್ತ್ರ ಯುದ್ಧಕ್ಕೆ ಒಂದೇ ಹೆಜ್ಜೆ’

7

‘ಅಣ್ವಸ್ತ್ರ ಯುದ್ಧಕ್ಕೆ ಒಂದೇ ಹೆಜ್ಜೆ’

Published:
Updated:

ಪಾಪಲ್ ವಿಮಾನದಿಂದ (ರಾಯಿಟರ್ಸ್): ಅಣ್ವಸ್ತ್ರ ಯುದ್ಧದ ಬಗ್ಗೆ ನಿಜಕ್ಕೂ ಭೀತಿ ಇದೆ. ವಿಶ್ವವು ಅದರಿಂದ ಒಂದು ಹೆಜ್ಜೆಯಷ್ಟೇ ದೂರ ಇದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಉತ್ತರ ಕೊರಿಯಾದಿಂದ ಕ್ಷಿಪಣಿ ದಾಳಿ ನಡೆಯುತ್ತದೆ ಎಂದು ಹವಾಯಿ ತಪ್ಪಾಗಿ ಎಚ್ಚರಿಕೆ ನೀಡಿದ ಬಳಿಕ ಅಮೆರಿಕದಲ್ಲಿ ಭಯಭೀತ ವಾತಾವರಣ ಉಂಟಾಗಿತ್ತು. ಇದಾದ ನಂತರ ಪೋಪ್ ಅವರು ಚಿಲಿ ಮತ್ತು ಪೆರುವಿಗೆ ತೆರಳುವ ವೇಳೆ ಈ ಹೇಳಿಕೆ ನೀಡಿದ್ದಾರೆ.

ಅಣ್ವಸ್ತ್ರ ಯುದ್ಧ ಸಾಧ್ಯತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೋಪ್, ‘ ನಾವು ತೀರಾ ಮಿತಿಯಲ್ಲಿದ್ದೇವೆ ಎನಿಸುತ್ತದೆ. ಈ ಕುರಿತು ನನಗೆ ಭಯ ಇದೆ. ಒಂದು ದುರಂತ ಸಾಕು ಸಂಗತಿಗಳು ಘಟಿಸಲು’ ಎಂದು ಹೇಳಿದ್ದಾರೆ. ಹವಾಯಿ ಅಥವಾ ಉತ್ತರ ಕೊರಿಯಾವನ್ನು ಅವರು ಉಲ್ಲೇಖಿಸಲಿಲ್ಲ.

ಈ ಹಿಂದೆಯೂ ಅಣ್ವಸ್ತ್ರ ಯುದ್ಧ ಕುರಿತು ಪೋಪ್ ಭೀತಿ ವ್ಯಕ್ತಪಡಿಸಿದ್ದು, ಅಣ್ವಸ್ತ್ರಗಳ ವಿರುದ್ಧ ಕ್ಯಾಥೊಲಿಕ್ ಚರ್ಚ್‌ಗಳು ಕಠಿಣ ನಿಲುವು ತಳೆಯುವಂತೆ ಬೋಧನೆ ಮಾಡಿದ್ದರು. ಭೀತಿ ಉಂಟುಮಾಡುವ ಉದ್ದೇಶದಿಂದಲೂ ರಾಷ್ಟ್ರಗಳು ಅಣ್ವಸ್ತ್ರ ಸಂಗ್ರಹ ಮಾಡಬಾರದು ಎಂದು ಅವರು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry