ಭುಟ್ಟೊ ಹತ್ಯೆ: ಹೊಣೆ ಹೊತ್ತ ತಾಲಿಬಾನ್‌

7

ಭುಟ್ಟೊ ಹತ್ಯೆ: ಹೊಣೆ ಹೊತ್ತ ತಾಲಿಬಾನ್‌

Published:
Updated:
ಭುಟ್ಟೊ ಹತ್ಯೆ: ಹೊಣೆ ಹೊತ್ತ ತಾಲಿಬಾನ್‌

ಇಸ್ಲಾಮಾಬಾದ್: 2007ರ ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್‌ ಭುಟ್ಟೊ ಅವರ ಹತ್ಯೆಯ ಹೊಣೆಯನ್ನು ತಾಲಿಬಾನ್‌ ಹೊತ್ತುಕೊಂಡಿದೆ ಎಂದು ನಿಷೇಧಿತ ಉಗ್ರ ಸಂಘಟನೆಯ ಪುಸ್ತಕದಲ್ಲಿ ಹೇಳಲಾಗಿದೆ.

ಭುಟ್ಟೊ ಅವರು ಮತ್ತೆ ಅಧಿಕಾರಕ್ಕೆ ಬಂದರೆ, ‘ಮುಜಾಹಿದ್ದೀನ್‌–ಇ–ಇಸ್ಲಾಮ್‌’ ಸಂಘಟನೆಯ ವಿರುದ್ಧ ಯೋಜನೆ ರೂಪಿಸಲು ಅಮೆರಿಕದೊಂದಿಗೆ ಕೈಜೋಡಿಸುತ್ತಿದ್ದರು. ಆದ್ದರಿಂದ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಾಲಿಬಾನ್‌ ಹೇಳಿದೆ.

‘ಅಮೆರಿಕವು ಮುಜಾಹಿದ್ದೀನ್‌ ಸಂಘಟನೆಯ ವಿರುದ್ಧ ಯೋಜನೆಯೊಂದನ್ನು ರೂಪಿಸಿ ಭುಟ್ಟೊ ಅವರಿಗೆ ನೀಡಿತ್ತು. ಭುಟ್ಟೊ ಮತ್ತೆ ಅಧಿಕಾರಕ್ಕೆ ಬಂದರೆ ಅಮೆರಿಕದ ಯೋಜನೆ ಕಾರ್ಯರೂಪಕ್ಕೆ ತರಲು ಅವರು ಯೋಚಿಸಿದ್ದರು. ಬೈತುಲ್ಲಾ (ಪಾಕಿಸ್ತಾನದ ತಾಲಿಬಾನ್‌ ಸಂಘಟನೆಯ ಸಂಸ್ಥಾಪಕ) ಅವರಿಗೆ ಈ ಯೋಜನೆಯ ಮಾಹಿತಿ ದೊರೆತಿತ್ತು’ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಭುಟ್ಟೊ ಹತ್ಯೆಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ ಎಂದು ದಿ ಡೈಲಿ ಟೈಮ್ಸ್‌ ವರದಿ ಮಾಡಿತ್ತು. ಆದರೆ, ಉರ್ದು ಭಾಷೆ

ಯಲ್ಲಿರುವ ತಾಲಿಬಾನ್‌ನ ’ಇನ್‌ಕಿಲಾಬ್‌ ಮೆಹಸೂದ್‌ ಸೌತ್‌ ವಝೀರಿಸ್ತಾನ್ ಫ್ರಮ್‌ ಬ್ರಿಟಿಷ್‌ ರಾಜ್‌ ಟು ಅಮೆರಿಕನ್‌ ಇಂಪೀರಿಯಲಿಸಂ’ ಪುಸ್ತಕದಲ್ಲಿ ತಾಲಿಬಾನ್‌ ಸಂಘಟನೆ ಹೊಣೆ ಹೊತ್ತುಕೊಂಡ ಸಂಗತಿಯನ್ನು ಉಲ್ಲೇಖಿಸಲಾಗಿದೆ.

ಭುಟ್ಟೊ ಮೇಲೆ ದಾಳಿ ನಡೆಸಿದ್ದು ತೆಹ್ರೀಕ್ ಇ ತಾಲಿಬಾನ್ ಉಗ್ರ ಸಂಘಟನೆ ಎಂದು ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಈ ಹಿಂದೆ ಆರೋಪಿಸಿದ್ದರು. ಆದರೆ ಅದನ್ನು ಸಂಘಟನೆ ನಿರಾಕರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry