ಅಫ್ಗಾನಿಸ್ತಾನ ಟೆಸ್ಟ್‌: ಬೆಂಗಳೂರು ಆತಿಥ್ಯ

6

ಅಫ್ಗಾನಿಸ್ತಾನ ಟೆಸ್ಟ್‌: ಬೆಂಗಳೂರು ಆತಿಥ್ಯ

Published:
Updated:

ನವದೆಹಲಿ (ಪಿಟಿಐ): ಅಪ್ಗಾನಿಸ್ತಾನ ತಂಡ ತನ್ನ ಚೊಚ್ಚಲ ಟೆಸ್ಟ್‌ ಪಂದ್ಯವನ್ನು ಭಾರತ ತಂಡದ ಎದುರು ಆಡಲಿದೆ. ಈ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸುವ ಸಾಧ್ಯತೆ ಇದೆ.

ಮಂಗಳವಾರ ನಡೆಯುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ ಜಂಟಿ ಸಭೆಯ ಬಳಿಕ ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ.

ಅಫ್ಗಾನಿಸ್ತಾನದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ಆತಿಥ್ಯ ವಹಿಸಲಿದೆ ಎಂದು ಹಿಂದಿನ ತಿಂಗಳು ಬಿಸಿಸಿಐ ಹೇಳಿಕೆ ನೀಡಿತ್ತು.

ಐದು ದಿನಗಳ ಆಟಕ್ಕೆ ಪದಾರ್ಪಣೆ ಮಾಡುತ್ತಿರುವ ಅಪ್ಗಾನಿಸ್ತಾನ ತಂಡವನ್ನು ಸ್ವಾಗತಿಸುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಹೇಳಿದೆ.

ಅಫ್ಗಾನಿಸ್ತಾನದ ರಶೀದ್ ಖಾನ್‌ ಹಾಗೂ ಮಹಮ್ಮದ್ ನಬಿ ಹೋದ ವರ್ಷ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಿದ್ದರು. ಈ ಋತುವಿನ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅಫ್ಗಾನಿಸ್ತಾನದ 13 ಆಟಗಾರರು ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry