ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ ವಡಕಲ್‌, ಅಂಜಲಿ ಮುಖ್ಯ ಸುತ್ತು ಪ್ರವೇಶ

ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌
Last Updated 15 ಜನವರಿ 2018, 19:28 IST
ಅಕ್ಷರ ಗಾತ್ರ

–ಸತೀಶ್‌ ಬಿ.

ಕಲಬುರ್ಗಿ: ರಾಜ್ಯದ ಆಟಗಾರರು ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಮಿಂಚಿದರು.

15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರಾಜ್ಯದ ಲವ ಟಿ.ವಡಕಲ್ 15–5, 15–9ರಿಂದ ತೆಲಂಗಾಣದ ಯಶವಂತ್‌ ಸಾಯಿ ಮೂರ್ತಿ ವಿರುದ್ಧ ಗೆದ್ದರು. ಅಭಿಜಿತ್‌ ಶ್ರೀವತ್ಸ 15–8, 15–6ರಿಂದ ಆಂಧ್ರಪ್ರದೇಶದ ನುಮಿಯರ್ ಶೇಖ್ ವಿರುದ್ಧ, ಶುಭಂ ಬಲ್ಲೋಡ್ಗಿಕರ್‌ 15–9, 15–3ರಿಂದ ತಮಿಳುನಾಡಿನ ಆರ್.ಮಿತೇಶ್ ಎದುರು, ಸಾತ್ವಿಕ್‌ ಶಂಕರ್‌ 15–2, 15–1ರಿಂದ ಆಂಧ್ರಪ್ರದೇಶದ ಡಿ.ಅನೀ‌ಶ್‌ ವಿರುದ್ಧ ಗೆಲುವು ಸಾಧಿಸಿದರು.

ಆರ್ಯ ನಾಯ್ಕ್ 15–5, 15–10ರಲ್ಲಿ ಮಧ್ಯಪ್ರದೇಶದ ಉತ್ಕರ್ಷ್‌ ಮೌರ್ಯ ವಿರುದ್ಧ ಗೆದ್ದರೆ, ಆದಿತ್ಯ ಪ್ರದೀಪ್ 15–5, 15–8ರಿಂದ ತಮಿಳುನಾಡಿನ ಎಸ್.ಬಿ.ಕೃತಿಕ್ ವಿರುದ್ಧ ಜಯ ಸಾಧಿಸಿದರು.

ಡಬಲ್ಸ್‌ನಲ್ಲಿ ಕರ್ನಾಟಕದ ಆದಿತ್ಯ ದಿವಾಕರ್ ಮತ್ತು ಎಂ.ಗೌತಮ್ ಜೋಡಿ 15–6, 15–7ರಲ್ಲಿ ತಮಿಳುನಾಡಿನ ಎಸ್.ಅರಣನ್‌–ವಿ.ನಿಖಿಲ್ ಆದಿತ್ಯ ವಿರುದ್ಧ, ಎಚ್.ವಿ.ಸಂತೃಪ್ತ್‌–ಎಸ್‌.ಸುಜಲ್ ಜೋಡಿ 15–8, 15–7ರಲ್ಲಿ ತೆಲಂಗಾಣದ ಉದಯ್ ತೇಜಾ ಮತ್ತು ಶ್ರವಂತ್ ಸೂರಿ ವಿರುದ್ಧ ಗೆದ್ದರು.

ಇದೇ ವಯೋಮಾನದ ಬಾಲಕಿಯರ ಸಿಂಗಲ್ಸ್‌ನಲ್ಲಿ ರಾಜ್ಯದ ಅಂಜಲಿ ಅಗರವಾಲ್‌ 15–12, 15–13ರಿಂದ ಮಹಾರಾಷ್ಟ್ರದ ವರದಾ ವಿರುದ್ಧ, ಗಾನವಿ ಪುಟ್ಟಮಾನೆ 15–9, 15–12ರಲ್ಲಿ ಮಹಾರಾಷ್ಟ್ರದ ಶ್ಯಾನ್ಸ್ಯಾ ಜೈನ್‌ ಎದುರು, ಆರಾಧನಾ 15–8, 15–11ರಲ್ಲಿ ಮಧ್ಯಪ್ರದೇಶದ ಪ್ರಣಿಕಾ ಹೋಳ್ಕರ್ ವಿರುದ್ಧ ಗೆದ್ದರು.

ಎ.ನೈಸಾ ಕಾರ್ಯಪ್ಪ 15–7, 15–5ರಲ್ಲಿ ಮಹಾರಾಷ್ಟ್ರದ ಗೌರಿ ಕದಂ ಎದುರು, ಗೌರಿ ರಾವ್‌ 15–7, 15–8ರಲ್ಲಿ ಮಹಾರಾಷ್ಟ್ರದ ಶ್ರೇಯಾ ಭೋಸ್ಲೆ ವಿರುದ್ಧ , ಅಶಿತಾ ಸಿಂಗ್ 15–11, 15–11ರಲ್ಲಿ ತಮಿಳುನಾಡಿನ ಸುಷ್ಮಾ ರಾಜೇಶ್‌ಕುಮಾರ್‌ ವಿರುದ್ಧ ಮತ್ತು ಎಚ್‌.ಎ.ಆಕರ್ಷಾ 15–2, 15–7ರಲ್ಲಿ ಗುಜರಾತ್‌ನ ಫ್ಲೋರಾ ಎಂಜಿನಿಯರ್‌ ವಿರುದ್ಧ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT