19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌

7

19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌

Published:
Updated:

ಅಲಿಂಕ್ಲನ್‌: ತೌಹಿದ್ ರಿದಯ್‌ (122) ಅವರ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಸೋಮವಾರ ಟೂರ್ನಿಯ ಎರಡನೇ ಪಂದ್ಯದಲ್ಲಿ ಜಯದಾಖಲಿಸಿದೆ.

ಕೆನಡಾ ತಂಡದ ಎದುರು ಬಾಂಗ್ಲಾ ಯುವ ಪಡೆ 66 ರನ್‌ಗಳಿಂದ ಗೆದ್ದಿದೆ. ಟಾಸ್‌ ಜಯಿಸಿದ ಕೆನಡಾ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಬಾಂಗ್ಲಾದೇಶ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 264ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಕೆನಡಾ 49.3 ಓವರ್‌ಗಳಲ್ಲಿ 198ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಕೆನಡಾದ ಆರಂಭಿಕ ಬ್ಯಾಟ್ಸ್‌ಮನ್ ಪ್ರಣವ್ ಶರ್ಮಾ (34) ನಾಯಕ ಅಸ್ಲಾನ್ ಖಾನ್ (63, 108ಎ, 4ಬೌಂ) ತಾಳ್ಮೆಯ ಇನಿಂಗ್ಸ್ ಕಟ್ಟಿದರು. ಆದರೆ ದೊಡ್ಡ ಮೊತ್ತ ಕಲೆಹಾಕಲು ಆಗಲಿಲ್ಲ.

ಮೊದಲು ಬ್ಯಾಟ್‌ ಮಾಡಿದ್ದ ಬಾಂಗ್ಲಾ ಪಡೆ ಆರಂಭಿಕ ಆಘಾತ ಅನುಭವಿಸಿತು. ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ತೌಹಿದ್ ರಿದಯ್‌ (122, 126ಎ, 9ಬೌಂ, 1ಸಿ) ಬಾಂಗ್ಲಾದೇಶ ತಂಡದ ಇನಿಂಗ್ಸ್ ಕಳೆಗಟ್ಟುವಂತೆ ಆಡಿದರು.

ಇಂಗ್ಲೆಂಡ್‌ಗೆ ಜಯ: ದಿನದ ಇನ್ನೊಂದು ಪಂದ್ಯದಲ್ಲಿ ನಮೀಬಿಯಾ ಎದುರು ಇಂಗ್ಲೆಂಡ್ ತಂಡ 8 ವಿಕೆಟ್‌ಗಳಿಂದ ಜಯಭೇರಿ ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 264 (ಮಹಮ್ಮದ್ ನಯೀಮ್‌ 47, ತೌಹಿದ್ ರಿದಯ್‌ 122, ಅಫೀಮ್‌ ಹುಸೇನ್‌ 50; ಫೈಜಲ್ ಜಮಖಂಡಿ 48ಕ್ಕೆ5). ಕೆನಡಾ: 49.3 ಓವರ್‌ಗಳಲ್ಲಿ 198 (ಪ್ರಣವ್ ಶರ್ಮಾ 34, ಅಸ್ಲಾನ್ ಖಾನ್ 63; ಅಫೀಫ್‌ ಹುಸೇನ್‌ 43ಕ್ಕೆ5). ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 66ರನ್‌ಗಳ ಜಯ.

ನಮೀಬಿಯಾ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 196 (ಶಾನ್ ಪೌಚ್‌ 44; ಲೂಕ್ ಹೋಲ್‌ಮನ್‌ 41ಕ್ಕೆ3, ಹ್ಯಾರಿ ಬ್ರೂಕ್‌ 32ಕ್ಕೆ2). ಇಂಗ್ಲೆಂಡ್‌: 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 198 (ಸವಿನ್ ಪೆರೇರಾ 26, ಹ್ಯಾರಿ ಬ್ರೂಕ್‌ 59, ವಿಲ್‌ ಜಾಕ್ಸ್‌ 73). ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry