ಕ್ವಾರ್ಟರ್‌ಫೈನಲ್‌ಗೆ ಕೂರ್ಗ್‌

7

ಕ್ವಾರ್ಟರ್‌ಫೈನಲ್‌ಗೆ ಕೂರ್ಗ್‌

Published:
Updated:

ಇಂಪಾಲ: ಎಮ್‌.ಬಿ.ಕಾರ್ಯಪ್ಪ ಅವರ ಎರಡು ಗೋಲುಗಳ ನೆರವಿನಿಂದ ಹಾಕಿ ಕೂರ್ಗ್ ತಂಡ ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ವತಿಯ ಪುರುಷರ 8ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ.

‘ಎಚ್‌’ ಗುಂಪಿನ ಪಂದ್ಯದಲ್ಲಿ ಹಾಕಿ ಕೂರ್ಗ್‌ 3–1ರಲ್ಲಿ ಬೆಂಗಾಲ್ ಹಾಕಿ ತಂಡವನ್ನು ಮಣಿಸಿದೆ. ಪಂದ್ಯ ಆರಂಭವಾದ ನಾಲ್ಕನೇ ನಿಮಿಷದಲ್ಲಿಯೇ ಹಾಕಿ ಕೂರ್ಗ್‌ ತಂಡ ಗೋಲು ಪಡೆಯಿತು. ಕಾರ್ಯಪ್ಪ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಬೆಂಗಾಲ್ ಹಾಕಿ ತಂಡ ಮೂರು ನಿಮಿಷಗಳ ಅಂತರದಲ್ಲಿಯೇ ಸಮಬಲ ಮಾಡಿಕೊಂಡಿತು. ನಾಯಕ ಶರೀಖ್‌ ಮಹಮ್ಮದ್ ಗೋಲು ತಂದಿತ್ತರು. ಮೂರನೇ ಕ್ವಾರ್ಟರ್‌ನಲ್ಲಿ ವೇಗದ ಆಟಕ್ಕೆ ಒತ್ತು ನೀಡಿದ ಕೂರ್ಗ್ ಎರಡು ಗೋಲು ಪಡೆಯುವ ಮೂಲಕ ಜಯ ತಮ್ಮದಾಗಿಸಿಕೊಂಡಿತು.

ಕೆ.ಎನ್‌.ರೋಹನ್‌ ತಿಮ್ಮಯ್ಯ (35ನೇ ನಿ.) ಹಾಗೂ ಕಾರ್ಯಪ್ಪ (43ನೇ ನಿ.) ಅವರ ಗೋಲುಗಳಿಂದ ಕೂರ್ಗ್ ತಂಡ ಜಯಭೇರಿ ದಾಖಲಿಸಿತು.

ದಿನದ ಮೊದಲ ಪಂದ್ಯದಲ್ಲಿ ಜಯದಾಖಲಿಸಿದ ಪಂಜಾಬ್‌ ನ್ಯಾಷನಲ್ ಬ್ಯಾಂಕ್ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. ‘ಎಫ್‌’ ಗುಂಪಿನ ಪಂದ್ಯದಲ್ಲಿ ಈ ತಂಡ ಸತತ ಮೂರು ಪಂದ್ಯಗಳನ್ನು ಗೆದ್ದಿದೆ.

ಸೋಮವಾರ 8–1 ಗೋಲುಗಳಲ್ಲಿ ಹಾಕಿ ಹಿಮಾಚಲ ಎದುರು ಗೆದ್ದಿತು. ಈ ತಂಡದ ಬಳಿ ಒಟ್ಟು ಒಂಬತ್ತು ಪಾಯಿಂಟ್ಸ್‌ಗಳು ಇವೆ. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೇರಳ ಹಾಕಿ 9–4ರಲ್ಲಿ ಹಾಕಿ ಮಧ್ಯಭಾರತಕ್ಕೆ ಸೋಲುಣಿಸಿತು. ಈ ತಂಡ ಗುಂಪು ಹಂತದಲ್ಲಿ ಗೆದ್ದ ಮೊದಲ ಪಂದ್ಯ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry