ಚಾಲೆಂಜರ್ಸ್‌ ಜಯಭೇರಿ

7

ಚಾಲೆಂಜರ್ಸ್‌ ಜಯಭೇರಿ

Published:
Updated:

ಹುಬ್ಬಳ್ಳಿ: ಸಾಧಾರಣ ಮೊತ್ತದ ಗುರಿ ಯನ್ನು ಪರದಾಡಿ ಮುಟ್ಟಿದ ಶಿರಸಿಯ ನಿಲೇಕಣಿ ಚಾಲೆಂಜರ್ಸ್‌ ತಂಡ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಐದು ವಿಕೆಟ್‌ಗಳ ಜಯ ಪಡೆಯಿತು.

ಶಿರಸಿಯ ಟಿ.ಎಸ್‌.ಎಸ್‌. ಟೈಗರ್ಸ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 120 ರನ್‌ ಗಳಿಸಿತ್ತು. ಈ ಗುರಿಯನ್ನು ಚಾಲೆಂಜರ್ಸ್‌ 19.2 ಓವರ್‌ಗಳಲ್ಲಿ ಮುಟ್ಟಿತು.

ಇನ್ನೊಂದು ಪಂದ್ಯದಲ್ಲಿ ಮುಂಡಗೋಡ ಮಾನ್‌ಸ್ಟರ್ಸ್‌ ಎದುರು ಎನ್‌.ಕೆ. ವಾರಿಯರ್ಸ್‌ 9 ವಿಕೆಟ್‌ಗಳ ಗೆಲುವು ಪಡೆಯಿತು.

ಮೊದಲು ಬ್ಯಾಟ್‌ ಮಾಡಿದ್ದ ಮಾನ್‌ ಸ್ಟರ್ಸ್‌ ನಿಗದಿತ ಓವರ್‌ಗಳಲ್ಲಿ 110 ರನ್‌ ಗಳಿಸಿತ್ತು. ವಾರಿಯರ್ಸ್‌ 17.5 ಓವರ್‌ಗಳಲ್ಲಿ ಗುರಿ ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry