42ನೇ ಸ್ಥಾನದಲ್ಲಿ ಸಂತೋಷ್‌

7

42ನೇ ಸ್ಥಾನದಲ್ಲಿ ಸಂತೋಷ್‌

Published:
Updated:

ತುಪಿಜಾ, ಬೊಲಿವಿಯಾ: ಅಮೋಘ ಚಾಲನ ಕೌಶಲ ಮೆರೆದ ಕರ್ನಾಟಕದ ಮೋಟರ್‌ ಬೈಕ್‌ ಸಾಹಸಿ ಸಿ.ಎಸ್‌.ಸಂತೋಷ್‌, ವಿಶ್ವ ಪ್ರಸಿದ್ಧ ಡಕಾರ್‌ ರ‍್ಯಾಲಿಯ ಎಂಟನೇ ಹಂತದ ಅಂತ್ಯಕ್ಕೆ ಒಟ್ಟಾರೆ 42ನೇ ಸ್ಥಾನದಲ್ಲಿದ್ದಾರೆ.

ಭಾನುವಾರ ನಡೆದ 498 ಕಿಲೊ ಮೀಟರ್‌ಗಳ ಮ್ಯಾರಥಾನ್‌ ಸ್ಪರ್ಧೆಯನ್ನು (ಎಂಟನೇ ಹಂತ) ಸಂತೋಷ್‌ 38ನೇಯವರಾಗಿ ಮುಗಿಸಿದರು.

ಮರಳುಗಾಡಿನ ಅಪಾಯಕಾರಿ ಇಳಿಜಾರುಗಳಲ್ಲಿ ಛಲದಿಂದ ಬೈಕ್‌ ಓಡಿಸಿದ ಹೀರೊ ಮೋಟರ್‌ ಸ್ಪೋರ್ಟ್ಸ್‌ ರ‍್ಯಾಲಿ ತಂಡದ ಸಂತೋಷ್‌ ಶರವೇಗದಲ್ಲಿ ಸಾಗಿ ಗುರಿ ಮುಟ್ಟಿದರು.

ಒಂಬತ್ತನೇ ಹಂತದ ರ‍್ಯಾಲಿ ಮಳೆಯಿಂದಾಗಿ ರದ್ದಾಗಿದೆ.

‘ಮ್ಯಾರಥಾನ್‌ ಸ್ಪರ್ಧೆ ಅತ್ಯಂತ ಸವಾಲಿನಿಂದ ಕೂಡಿತ್ತು. 80 ಕಿ.ಮೀಗಳ ವಿಶೇಷ ಹಂತದಲ್ಲಿ ಬೈಕ್‌ ಓಡಿಸುವುದು ತುಂಬಾ ಕಷ್ಟವಾಗಿತ್ತು. ಇದರ ನಡುವೆಯೂ ರ‍್ಯಾಲಿ ಪೂರೈಸಿದ್ದು ಖುಷಿ ನೀಡಿದೆ. ಮುಂದಿನ ಹಂತದಲ್ಲೂ ಇದೇ ರೀತಿ ಬೈಕ್‌ ಚಲಾಯಿಸಿ ಸ್ಥಾನ ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ಸಂತೋಷ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry