ಪಿಂಚಣಿ ಹೆಚ್ಚಿಸಿ

7

ಪಿಂಚಣಿ ಹೆಚ್ಚಿಸಿ

Published:
Updated:

ಖಾಸಗಿ ರಂಗದ ನಿವೃತ್ತ ಉದ್ಯೋಗಿಗಳಾದ ನಮಗೆ ಈಗ ಕನಿಷ್ಠ ₹ 1000, ಗರಿಷ್ಠ ₹ 3000 ಪಿಂಚಣಿ ಸಿಗುತ್ತಿದೆ.

ಈ ಪುಡಿಗಾಸು ಪಿಂಚಣಿಯಿಂದ ಜೀವನ ಸಾಗಿಸುವುದಾದರೂ ಹೇಗೆ? ಹೀಗೆ ಹೆಸರಿಗಷ್ಟೇ ಪಿಂಚಣಿ ಕೊಡುವ ವ್ಯವಸ್ಥೆಯಿಂದ ಬದುಕು ಅಸಹನೀಯ ವಾಗಿದೆ.

ಪಿಂಚಣಿ ಕನಿಷ್ಠ ಮೊತ್ತವನ್ನು₹ 7500ಕ್ಕೆ ಹೆಚ್ಚಿಸುವುದು ನ್ಯಾಯೋಚಿತ. ಇದಕ್ಕೆ ರಾಷ್ಟ್ರ ಮಟ್ಟದಲ್ಲಿ ಹಕ್ಕೊತ್ತಾಯ ಈಗ ಕೇಳಿಬರುತ್ತಿರುವುದು ಸ್ವಾಗತಾರ್ಹ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಸ್ಪಂದಿಸಬೇಕು. ಆ ಮೂಲಕ ನಿವೃತ್ತರ ಕುಟುಂಬಗಳಿಗೆ ಎರಡು ಹೊತ್ತು ಗಂಜಿಗೆ ದಾರಿ ಮಾಡಿಕೊಡಬೇಕು.

ಜಿ. ರಮೇಶ್, ಭದ್ರಾವತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry