ಶಕೀಬ್‌ ಆಲ್‌ರೌಂಡ್‌ ಆಟ

7
ಜಿಂಬಾಬ್ವೆ ಎದುರು ಗೆದ್ದ ಬಾಂಗ್ಲಾ

ಶಕೀಬ್‌ ಆಲ್‌ರೌಂಡ್‌ ಆಟ

Published:
Updated:
ಶಕೀಬ್‌ ಆಲ್‌ರೌಂಡ್‌ ಆಟ

ಢಾಕಾ (ಎಎಫ್‌ಪಿ): ಶಕೀಬ್‌ ಅಲ್ ಹಸನ್‌ (43ಕ್ಕೆ3) ಮತ್ತು (37; 46ಎ, 5 ಬೌಂ) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಬಾಂಗ್ಲಾದೇಶ ತಂಡ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸಿದೆ.

ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 49 ಓವರ್‌ಗಳಲ್ಲಿ 170ರನ್‌ಗಳಿಗೆ ಆಲೌಟ್‌ ಆಯಿತು.

ಸುಲಭ ಗುರಿಯನ್ನು ಬಾಂಗ್ಲಾ ತಂಡ 28.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ಎರಡು ರನ್‌ ಗಳಿಸಿದ್ದಾಗ ಸುಲೈಮನ್ ಮಿರ್ (0) ಮತ್ತು ಕ್ರೆಗ್‌ ಎರ್ವಿನ್‌ (0) ಪೆವಿಲಿಯನ್‌ ಸೇರಿಕೊಂಡರು. ಇವರ ವಿಕೆಟ್‌ ಕೆಡವಿದ ಶಕೀಬ್‌ ಆರಂಭದಲ್ಲೇ ಬಾಂಗ್ಲಾ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಬಾಂಗ್ಲಾ ಬೌಲರ್‌ಗಳ ಎದುರು ಹ್ಯಾಮಿಲ್ಟನ್‌ ಮಸಕಜ (15; 24ಎ, 2ಬೌಂ) ಮತ್ತು ಬ್ರೆಂಡನ್‌ ಟೇಲರ್‌ (24; 45ಎ, 2ಬೌಂ) ಅವರ ಆಟವೂ ನಡೆಯಲಿಲ್ಲ. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ದಿಟ್ಟ ಆಟ ಆಡಿದ ಸಿಕಂದರ ರಾಜಾ (52; 99ಎ, 2ಬೌಂ, 2ಸಿ) ಅರ್ಧಶತಕ ಗಳಿಸಿ ಮಿಂಚಿದರು.

ಪೀಟರ್‌ ಮೂರ್‌ (33; 58ಎ, 2ಬೌಂ) ಕೂಡ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು.

ಗುರಿ ಬೆನ್ನಟ್ಟಿದ ಬಾಂಗ್ಲಾಕ್ಕೆ ತಮಿಮ್‌ ಇಕ್ಬಾಲ್‌ (84; 93ಎ, 8ಬೌಂ, 1ಸಿ) ಮತ್ತು ಅನಾಮುಲ್‌ ಹಕ್‌ (19; 14ಎ, 4ಬೌಂ) ಉತ್ತಮ ಆರಂಭ ನೀಡಿದರು. ನಾಲ್ಕನೇ ಓವರ್‌ನಲ್ಲಿ ಅನಾಮುಲ್‌ ಔಟಾದರು. ಬಳಿಕ ಬಂದ ಶಕೀಬ್‌ ಅಲ್‌ ಹಸನ್‌ ಕಲಾತ್ಮಕ ಆಟ ಆಡಿ ತಂಡದ ರನ್‌ ಗಳಿಕೆಗೆ ವೇಗ ತುಂಬಿದರು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ: 49 ಓವರ್‌ಗಳಲ್ಲಿ 170 (ಹ್ಯಾಮಿಲ್ಟನ್‌ ಮಸಕಜ 15, ಬ್ರೆಂಡನ್‌ ಟೇಲರ್‌ 24, ಸಿಕಂದರ ರಾಜಾ 52, ಮಾಲ್ಕಮ್‌ ವಾಲರ್‌ 13, ಪೀಟರ್‌ ಮೂರ್‌ 33, ಗ್ರೇಮ್‌ ಕ್ರೀಮರ್‌ 12; ಶಕೀಬ್‌ ಅಲ್‌ ಹಸನ್‌ 43ಕ್ಕೆ3, ಸಂಜಾಮುಲ್‌ ಇಸ್ಲಾಂ 29ಕ್ಕೆ1, ಮಷ್ರಫೆ ಮೊರ್ತಜಾ 25ಕ್ಕೆ1, ಮುಸ್ತಾಫಿಜುರ್‌ ರಹಮಾನ್‌ 29ಕ್ಕೆ2, ರುಬೆಲ್‌ ಹೊಸೇನ್‌ 24ಕ್ಕೆ2).

ಬಾಂಗ್ಲಾದೇಶ: 28.3 ಓವರ್‌ಗಳಲ್ಲಿ 2 ವಿಕೆಟ್‌ಗೆ 171 (ತಮಿಮ್‌ ಇಕ್ಬಾಲ್‌ ಔಟಾಗದೆ 84, ಅನಾಮುಲ್‌ ಹಕ್‌ 19, ಶಕೀಬ್‌ ಅಲ್‌ ಹಸನ್‌ 37, ಮುಷ್ಫಿಕುರ್‌ ರಹೀಮ್‌ ಔಟಾಗದೆ 14; ಸಿಕಂದರ ರಾಜಾ 53ಕ್ಕೆ2).

ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 8 ವಿಕೆಟ್‌ ಗೆಲುವು.

ಪಂದ್ಯ ಶ್ರೇಷ್ಠ: ಶಕೀಬ್‌ ಅಲ್‌ ಹಸನ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry