ಬಾಕ್ಸಿಂಗ್‌: ಭಾರತಕ್ಕೆ 11 ಚಿನ್ನ

7

ಬಾಕ್ಸಿಂಗ್‌: ಭಾರತಕ್ಕೆ 11 ಚಿನ್ನ

Published:
Updated:

ನವದೆಹಲಿ: ಭಾರತದ ಬಾಕ್ಸರ್‌ಗಳು ಸರ್ಬಿಯಾದ ಸೊಂಬರ್‌ ನಲ್ಲಿ ನಡೆಯುತ್ತಿರುವ ಏಳನೇ ಜೂನಿ ಯರ್‌ ಮತ್ತು ಯೂತ್‌ ನೇಷನ್ಸ್‌ ಕಪ್‌ ಟೂರ್ನಿಯಲ್ಲಿ ಸೋಮವಾರ 11 ಚಿನ್ನ ಗೆದ್ದಿದ್ದಾರೆ.

ಜೂನಿಯರ್‌ ತಂಡದವರು ಒಟ್ಟಾರೆ 9 ಚಿನ್ನ ಹಾಗೂ ತಲಾ ಎರಡು ಬೆಳ್ಳಿ ಮತ್ತು ಕಂಚು ಜಯಿಸಿದರೆ, ಯೂತ್‌ ತಂಡದವರು ಮೂರು ಚಿನ್ನ ಮತ್ತು ಒಂದು ಕಂಚಿಗೆ ಕೊರಳೊಡ್ಡಿದ್ದಾರೆ.

ಜೂನಿಯರ್‌ ವಿಭಾಗದಲ್ಲಿ ಏಕ್ತಾ ಸರೋಜ್‌ (46 ಕೆ.ಜಿ), ಬೇಬಿ ರೋಜಿಸಾನ ಚಾನು (52 ಕೆ.ಜಿ), ಪೂನಮ್‌ (54 ಕೆ.ಜಿ), ಅರುಂದತಿ ಚೌಧರಿ (60 ಕೆ.ಜಿ), ವಿನಕಾ (63 ಕೆ.ಜಿ), ಮಿತಿಕಾ ಗುನೆಲೆ (66 ಕೆ.ಜಿ), ರಾಜ್‌ ಸಾಹೀಬ (70 ಕೆ.ಜಿ), ಸನಮಚಾ ಚಾನು (75 ಕೆ.ಜಿ) ಮತ್ತು ಕೋಮಲ್‌ (+80 ಕೆ.ಜಿ) ಚಿನ್ನಕ್ಕೆ ಮುತ್ತಿಕ್ಕಿದರು.

ಸಂಜೀತಾ (48 ಕೆ.ಜಿ) ಮತ್ತು ಲಿಪಾಕ್ಷಿ ಬೆಳ್ಳಿ ಜಯಿಸಿದರೆ, ಅರ್ಷಿ ಖಾನಮ್‌ (50 ಕೆ.ಜಿ) ಮತ್ತು ಯಾಶಿ ಶರ್ಮಾ (57 ಕೆ.ಜಿ) ಕಂಚಿಗೆ ತೃಪ್ತಿ ಪಟ್ಟರು.

ಯೂತ್‌ ವಿಭಾಗದಲ್ಲಿ ಜೋನಿ (60 ಕೆ.ಜಿ), ಲಲಿತಾ (64 ಕೆ.ಜಿ) ಹಾ‌ಗೂ ನಂದಿನಿ (81 ಕೆ.ಜಿ) ಚಿನ್ನ ತಮ್ಮದಾಗಿಸಿಕೊಂಡರು.

54 ಕೆ.ಜಿ. ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿದ್ದ ರಾಜಬಾಲ ಕಂಚು ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry