ಬೆತ್ತನಗೆರೆ ಶಂಕರ ಸೆರೆ

7

ಬೆತ್ತನಗೆರೆ ಶಂಕರ ಸೆರೆ

Published:
Updated:

ಬೆಂಗಳೂರು: ದರೋಡೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ಬೆತ್ತನಗೆರೆ ಶಂಕರೇಗೌಡ ಅಲಿಯಾಸ್ ಶಂಕರ (36) ಹಾಗೂ ಆತನ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಭಾನುವಾರ ಮಧ್ಯಾಹ್ನ ಬಂಧಿಸಿದ್ದಾರೆ.

ಬೆತ್ತನಗೆರೆ ಮಂಜುನಾಥ (30), ದೊಡ್ಡಬಿದರಕಲ್ಲಿನ ನಾರಾಯಣಸ್ವಾಮಿ (31), ನೆಲಮಂಗಲದ ಶ್ರೀಧರ್ ಹಾಗೂ ಶ್ರೀಕಾಂತ್ (32) ಬಂಧಿತರು.

ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಶ್ರೀಗಂಧನಗರ ಕಡೆಯಿಂದ ಪಿಳ್ಳಪ್ಪನಕಟ್ಟೆಗೆ ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಆರೋಪಿಗಳು ಹೊಂಚು ಹಾಕಿದ್ದರು. ಈ ಬಗ್ಗೆ ಬಾತ್ಮೀದಾರರಿಂದ ಸಿಕ್ಕ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆದಿದೆವು ಎಂದು ಪೊಲೀಸರು ತಿಳಿಸಿದರು.

ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದೇವೆ. ಆರೋಪಿಗಳು ಈ ಹಿಂದೆ ನಡೆಸಿದ ಕೃತ್ಯದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry