ಪಾಕ್‌ಗೆ ತಿರುಗೇಟು: 7 ಯೋಧರ ಹತ್ಯೆ

7
ಕದನ ವಿರಾಮ ಉಲ್ಲಂಘನೆ, ಉಗ್ರರ ನುಸುಳುವಿಕೆಗೆ ತಕ್ಕ ಉತ್ತರ ಕೊಟ್ಟ ಭಾರತ

ಪಾಕ್‌ಗೆ ತಿರುಗೇಟು: 7 ಯೋಧರ ಹತ್ಯೆ

Published:
Updated:
ಪಾಕ್‌ಗೆ ತಿರುಗೇಟು: 7 ಯೋಧರ ಹತ್ಯೆ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮೆಂಧರ್‌ ವಲಯದಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಭಾರತದ ಯೋಧರು ತಿರುಗೇಟು ನೀಡಿದ್ದಾರೆ. ಭಾರತದ ಸೈನಿಕರ ಕಾರ್ಯಾಚರಣೆಗೆ ಪಾಕಿಸ್ತಾನದ ಏಳು ಯೋಧರು ಮೃತಪಟ್ಟಿದ್ದಾರೆ.

ಜತೆಗೆ, ಇದೇ ಪ್ರದೇಶದಲ್ಲಿ ಪಾಕಿಸ್ತಾನ ಮೂಲದ ಜೈಷ್‌–ಇ–ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ನಾಲ್ವರು ಉಗ್ರರು ಭಾರತದೊಳಕ್ಕೆ ನುಸುಳುವ ಪ್ರಯತ್ನ ನಡೆಸಿದಾಗ ಅವರನ್ನು ಯೋಧರು ಹೊಡೆದುರುಳಿಸಿದ್ದಾರೆ.

ಭಾರತವು ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಬಲಪಡಿಸಲಿದೆ ಮತ್ತು ಪಾಕಿಸ್ತಾನದ ಪ್ರವೃತ್ತಿ ಹೀಗೆಯೇ ಮುಂದುವರಿದರೆ ‘ಬೇರೆ ರೀತಿಯ ಕ್ರಮ’ಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಭಾರತದ ಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ದಿನವೇ ಈ ಎರಡೂ ಘಟನೆಗಳು ನಡೆದಿವೆ.

ಸೇನಾ ದಿನದ ಅಂಗವಾಗಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ರಾವತ್‌, ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಪಾಕಿಸ್ತಾನ ಸೇನೆ ನಿರಂತರವಾಗಿ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದಾರೆ. ‌

‘ಮೆಂಧರ್‌ ವಲಯದ ಜಗ್‌ಲೋಟ್‌ನಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಭಾರತದ ಯೋಧರತ್ತ ಸೋಮವಾರ ಬೆಳಿಗ್ಗೆ ಷೆಲ್‌ ದಾಳಿ ನಡೆಸಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಿದ ಭಾರತದ ಗಡಿ ಗಸ್ತು ಯೋಧರು, ಭಾರಿ ಷೆಲ್‌ ದಾಳಿಯ ಮೂಲಕ ಪಾಕಿಸ್ತಾನದ ಕಾವಲು ಠಾಣೆಯೊಂದನ್ನು ನಾಶ ಪಡಿಸಿದ್ದಾರೆ. ಮೃತಪಟ್ಟ ಏಳು ಯೋಧರಲ್ಲಿ ಒಬ್ಬ ಮೇಜರ್ ಕೂಡ ಸೇರಿದ್ದಾರೆ. ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.

ಆದರೆ, ಭಾರತದ ದಾಳಿಗೆ ನಾಲ್ವರು ಯೋಧರಷ್ಟೇ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಯೋಧರು ನಡೆಸಿದ ದಾಳಿಗೆ ಭಾರತದ ಮೂವರು ಸೈನಿಕರು ಸತ್ತಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.

ರಾಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನದ ಯೋಧರು ಶನಿವಾರ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಗೆ ಭಾರತದ ಒಬ್ಬ ಯೋಧ ಬಲಿಯಾಗಿದ್ದರು.

ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಲಾಗುತ್ತಿದೆ ಎಂದು ಎರಡೂ ದೇಶಗಳು ಆರೋಪಿಸುತ್ತಿವೆ. 2018ರ ಮೊದಲ ವಾರದಲ್ಲಿಯೇ ಭಾರತ 70 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಈ ದಾಳಿಯಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದು ಐವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.

‘ಭಾರತ ವಿರೋಧಿ ಚಟುವಟಿಕೆಗೆ ಬಿಡೆವು’

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಸಲು ಅವಕಾಶವೇ ಕೊಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಇಂತಹ ಚಟುವಟಿಕೆಗಳನ್ನು ನಿಲ್ಲಿಸಲಾಗುವುದು. ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಪಿನ್‌ ರಾವತ್‌ ಹೇಳಿದ್ದಾರೆ.

ಸೇನಾ ದಿನದ ಅಂಗವಾಗಿ ಯೋಧರನ್ನು ಉದ್ದೇಶಿಸಿ ಅವರು ಮಾತನಾಡಿದರು. ಚೀನಾ ಜತೆಗಿನ ನೈಜ ನಿಯಂತ್ರಣ ರೇಖೆಯಲ್ಲಿಯೂ ವಿವಾದ ಇದೆ. ಅಲ್ಲಿ ಅತಿಕ್ರಮಣಗಳು ನಡೆಯುತ್ತಿವೆ. ಅದನ್ನು ನಿಲ್ಲಿಸಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.

* ಟ್ಯುಟಿಂಗ್‌ನಲ್ಲಿ ನಮ್ಮನ್ನು ಕಂಡ ಚೀನೀಯರು ಸಲಕರಣೆಗಳನ್ನು ಬಿಟ್ಟು ಪರಾರಿಯಾದರು. ಮುಂದೆ ಯಾವುದೇ ದುಸ್ಸಾಹ<br/>ಸಕ್ಕೆ ಅವರು ಕೈಹಾಕಲಿಕ್ಕಿಲ್ಲ

–ಲೆ. ಜ. ಅಭಯ ಕೃಷ್ಣ, ಪೂರ್ವ ಕಮಾಂಡ್‌ನ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry