ಸ್ವಚ್ಛತೆಗೆ ಕೈಜೋಡಿಸಿದ ಜಪಾನಿ ಪ್ರಜೆ

7

ಸ್ವಚ್ಛತೆಗೆ ಕೈಜೋಡಿಸಿದ ಜಪಾನಿ ಪ್ರಜೆ

Published:
Updated:
ಸ್ವಚ್ಛತೆಗೆ ಕೈಜೋಡಿಸಿದ ಜಪಾನಿ ಪ್ರಜೆ

ಮಂಗಳೂರು: ರಾಮಕೃಷ್ಣ ಮಿಷನ್‌ನ ನಾಲ್ಕನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 11 ನೇ ವಾರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಜಪಾನಿ ಪ್ರಜೆ ಯೋಕೋ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.

ಭಾನುವಾರ ನಗರದ ಕೊಡಿಯಾ ಲಬೈಲ್‌ ಪಿವಿಎಸ್ ವೃತ್ತದ ಪ್ರದೇಶದಲ್ಲಿ ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಅಭಿಯಾ ನಕ್ಕೆ ಚಾಲನೆ ನೀಡಲಾಯಿತು. ಮಂಗ ಳೂರು ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ರಮೇಶ್ ರಾವ್ ಹಾಗೂ ಬೆಸೆಂಟ್ ಕಾಲೇಜಿನ ಉಪನ್ಯಾಸಕ ಬೀಡುಬೈಲು ಗಣಪತಿ ಭಟ್ ಅವರು ಹಸಿರು ನಿಶಾನೆ ತೋರಿದರು. ರಾಮ ಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ, ಬ್ರಹ್ಮಚಾರಿ ಶಿವ ಕುಮಾರ್, ಸುಬ್ರಾಯ್ ನಾಯಕ್ ಸೇರಿದಂತೆ ಸುಮಾರು ಇನ್ನೂರು ಕಾರ್ಯಕರ್ತರು ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಬೆಸೆಂಟ್ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಉಪನ್ಯಾಸಕ ಆಂಡ್ರೂ ರೋಡ್ರಿಗಸ್, ಪ್ರೊ. ಅಮಿತಾ ಮಾರ್ಗದರ್ಶನದಲ್ಲಿ ಪಿವಿಎಸ್ ವೃತ್ತ ದಿಂದ ಕರಂಗಲಪಾಡಿ ಸಾಗುವ ಮುಖ್ಯರಸ್ತೆಯ ಬದಿಗಳನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದರು. ಚೇತನಾ ಕಾಟಿಯಾರ್ ಹಾಗೂ ಬಳಗದ ಮತ್ತೊಂದು ಗುಂಪು ತೋಡಿನಲ್ಲಿದ್ದ ಕಸಕಡ್ಡಿ ತೆಗೆದು ಹಸನು ಮಾಡಿದರು. ನಿವೇದಿತಾ ಬಳಗದ ಸದಸ್ಯೆಯರು ಉಷಾ ದಿನಕರ್ ರಾವ್ ಹಾಗೂ ವಾಸಂತಿ ನಾಯಕ್ ಜತೆಗೂಡಿ, ಒಟ್ಟು ಗೂಡಿದ ತ್ಯಾಜ್ಯವನ್ನು ಟಿಪ್ಪರ್‌ಗೆ ತುಂಬಿಸುವ ಕಾರ್ಯ ಮಾಡಿದರು. ಕೆಪಿಟಿ ಎನ್‌ಎಸ್‌ಎಸ್ ಯುವ ಕಾರ್ಯ ಕರ್ತರು, ಕಾಂಪೌಂಡಿನ ಮೇಲೆ ಹಾಗೂ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕತ್ತರಿಸಿದರು.

ಬಸ್ ತಂಗುದಾಣಕ್ಕೆ ಬಣ್ಣ: ಕೊಡಿಯಾಲ ಬೈಲ್ ಬಸ್ ತಂಗುದಾಣ ನಿರ್ವಹಣೆ ಇಲ್ಲದೇ ಪ್ರಯಾಣಿಕರು ಕುಳಿತುಕೊಳ್ಳಲು ಹಿಂಜರಿಯುತ್ತಿದ್ದುದನ್ನು ಗಮನಿಸಿ, ಸ್ವಚ್ಛ ಮಂಗಳೂರು ಕಾರ್ಯಕರ್ತರು ಅಲ್ಲಲ್ಲಿ ಅಂಟಿಸಲಾಗಿದ್ದ ಪೋಸ್ಟರ್‌ಗಳನ್ನು ಕಿತ್ತುಹಾಕಿದರು.

ಪಾಚಿಹಿಡಿದ ಮೇಲ್ಚಾವಣಿಯನ್ನು ನೀರಿನಿಂದ ತಿಕ್ಕಿ ತೊಳೆದು ತಂಗು ದಾಣದ ಒಳಭಾಗ ಹಾಗೂ ಹೊರಭಾಗಗಳನ್ನು ಬಣ್ಣ ಹಚ್ಚಿ ಸುಂದರಗೊಳಿಸಿದರು. ರಾಜೇಶ್ವರಿ ಕೋಡಿಕಲ್, ಸುಧೀರ್ ಕೊಕ್ರಾಡಿ ಹಾಗೂ ಹಿಂದೂ ವಾರಿಯರ್ಸ್‌ನ ಸದಸ್ಯರು ಸುಮಾರು ಎರಡು ಗಂಟೆ ಶ್ರಮದಾನ ಮಾಡಿ ತಂಗುದಾಣವನ್ನು ಸುಂದರಗೊಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗದ ಕಿತ್ತುಹೋಗಿದ್ದ ಪುಟ್‌ ಪಾತ್‌ ಅನ್ನು ಸರಿಪಡಿಸಲಾಯಿತು. ಸುಮಾರು ಹತ್ತು ಕಲ್ಲಿನ ಸ್ಲಾಬ್‌ಗಳನ್ನು ಹೊತ್ತು ತಂದು, ಕಾಲುದಾರಿಯನ್ನು ಸರಿ ಮಾಡಲಾಯಿತು. ತೋಡುಗಳನ್ನು ಸ್ವಚ್ಛಗೊಳಿಸಿ, ಮೇಲ್ಭಾಗ ಮುಚ್ಚಲಾ ಯಿತು. ಅಭಿಯಾನದ ಮುಖ್ಯ ಸಂಯೋಜಕ ದಿಲರಾಜ್ ಆಳ್ವ ಮಾರ್ಗ ದರ್ಶನದಲ್ಲಿ ಸಂದೀಪಕುಮಾರ್ ತಾರಾ ನಾಥ್ ಹಾಗೂ ಕುಮಾರ್ ಜಿಮ್ ಗೆಳೆಯರು ಶ್ರಮವಹಿಸಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ಲಯದ ಆವರಣ ಗೋಡೆಯನ್ನು ನೀರಿನಿಂದ ತೊಳೆಯಲಾಯಿತು. ಅದಕ್ಕೆ ತಾಗಿಕೊಂಡಿರುವ ಪುಟ್‌ಪಾತ್‌ ನಲ್ಲಿ ಹಾಕಿದ್ದ ಕಸದ ರಾಶಿಯನ್ನು ತೆಗೆಯಲಾಯಿತು. ಸುತ್ತಲಿನ ಎಲ್ಲ ಅಂಗಡಿಗಳಿಗೆ ಹೋಗಿ, ಕಾಲು ದಾರಿಯಲ್ಲಿ ಕಸ ಸುರಿಯದಂತೆ ವಿನಂತಿಸಲಾಗಿದೆ.

ಕೊಳೆಯಾಗಿದ್ದ ಕಾಂಪೌಂಡ್‌ಗೆ ಬಣ್ಣ ಬಳಿಯಲಾಯಿತು. ಬರುವ ದಿನಗಳಲ್ಲಿ ತ್ಯಾಜ್ಯ ಬೀಳದಂತೆ ನೋಡಿಕೊಂಡು ಆವರಣ ಗೋಡೆಯನ್ನು ಅರ್ಥಪೂರ್ಣ ಚಿತ್ರಗಳಿಂದ ಸುಂದರಗೊ ಳಿಸಲಾಯಿತು.

ಶುಭೋದಯ ಆಳ್ವ, ಸುರೇಶ್ ಶೆಟ್ಟಿ, ಉಮಾನಾಥ್ ಕೋಟೆಕಾರ್ ಅಭಿಯಾ ನದ ಉಸ್ತುವಾರಿ ವಹಿಸಿದ್ದರು. ಪಿ.ಎನ್. ಭಟ್, ರಕ್ಷಿತ್ ಕೆ.ಪಿ.ಆರ್., ರಾಜೇಂದ್ರ ಡಿ.ಎಸ್. ಸೇರಿದಂತೆ ಹಲವರು ಅಭಿಯಾನದಲ್ಲಿ ಭಾಗವಹಿಸಿದ್ದರು.

ಎಲ್ಲ ಕಾರ್ಯಕರ್ತರಿಗೆ ಶ್ರೀ ಲಕ್ಷ್ಮೀನಾರಾಯಣಿ ದೇವಸ್ಥಾನದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಸ್ವಚ್ಛತಾ ಅಭಿಯಾನಕ್ಕೆ ಎಂಆ ರ್‌ಪಿಎಲ್ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry