ಮಹದಾಯಿ ವಿಚಾರದಲ್ಲಿ ಕರ್ನಾಟಕ ಸುಳ್ಳು ಹೇಳುತ್ತ ಬಂದಿದೆ: ಗೋವಾ ಸಚಿವ ವಿನೋದ ಪಾಲ್ಯೇಕರ್‌

7
ಮಹದಾಯಿ ವಿವಾದ

ಮಹದಾಯಿ ವಿಚಾರದಲ್ಲಿ ಕರ್ನಾಟಕ ಸುಳ್ಳು ಹೇಳುತ್ತ ಬಂದಿದೆ: ಗೋವಾ ಸಚಿವ ವಿನೋದ ಪಾಲ್ಯೇಕರ್‌

Published:
Updated:
ಮಹದಾಯಿ ವಿಚಾರದಲ್ಲಿ ಕರ್ನಾಟಕ ಸುಳ್ಳು ಹೇಳುತ್ತ ಬಂದಿದೆ: ಗೋವಾ ಸಚಿವ ವಿನೋದ ಪಾಲ್ಯೇಕರ್‌

ಪಣಜಿ : ‘ಮಹದಾಯಿ ನದಿ ನೀರಿನ ಹಂಚಿಕೆ ವಿವಾದದಲ್ಲಿ ಕರ್ನಾಟಕವು ಇವರೆಗೂ ಸುಳ್ಳುಗಳನ್ನೆ ಹೇಳಿಕೊಂಡು ಬಂದಿದೆ’ ಎಂದು ಗೋವಾ ನೀರಾವರಿ ಸಚಿವ ವಿನೋದ ಪಾಲ್ಯೇಕರ್‌ ಹೇಳಿದ್ದಾರೆ.

‘ಕರ್ನಾಟಕದ ನೀರಾವರಿ ಸಚಿವರು ಗೋವಾದವರನ್ನು ಸುಳ್ಳುಗಾರರೆಂದು ಭಾವಿಸಿದ್ದಾರೆ. ಆದರೆ, ಕರ್ನಾಟಕದವರೆ ನದಿ ನೀರು ಹಂಚಿಕೆ ವಿವಾದದಲ್ಲಿ 2007ರಿಂದಲೂ ಸುಳ್ಳುಗಳನ್ನು ಹೇಳುತ್ತ ಬಂದಿದ್ದಾರೆ. ಅವರ ಸುಳ್ಳುಗಳನ್ನು ಸಾಕ್ಷ್ಯಾಧಾರಗಳ ಸಮೇತ ಮಹದಾಯಿ ನ್ಯಾಯಾಧೀಕರಣದ ಮುಂದೆ ಬಿಚ್ಚಿಡುತ್ತೇವೆ’ ಎಂದು ತಿಳಿಸಿದ್ದಾರೆ.

‘ಗೋವಾದ ಜನರಿಗೆ ಸುಳ್ಳು ಹೇಳುವ ಚಾಳಿ ಇಲ್ಲ. ನಮ್ಮ ಎಂಜಿನಿಯರ್‌ಗಳ ತಂಡದೊಂದಿಗೆ ಕಣಕುಂಬಿಗೆ ಭೇಟಿ ನೀಡಿದಾಗ, ಅಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕುರುಹುಗಳನ್ನು ಕಂಡವು. ಅವುಗಳನ್ನು ನ್ಯಾಯಾಧೀಕರಣದ ಮುಂದೆ ಪ್ರಸ್ತುತ ಪಡಿಸುತ್ತೇವೆ’ ಎಂದರು.

'ನೀರು ಹಂಚಿಕೆ ವಿವಾದದಲ್ಲಿ ಸಾಕ್ಷ್ಯಾಧಾರಗಳನ್ನು ತಮ್ಮ ಕಡೆ ಮಾಡಿಕೊಳ್ಳಲು ಕರ್ನಾಟಕದವರು ಬೇಕಾದವರಿಗೆ ಹಣ ಪಾವತಿಸುತ್ತಿದ್ದಾರೆ’ ಎಂದು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ವಿನೋದ ಪಾಲ್ಯೇಕರ್‌ ಬಳಿಕ ಕಣಕುಂಬಿಗೆ ಭೇಟಿ ನೀಡಿದ್ದ ರಾಜ್ಯ ನೀರಾವರಿ ಸಚಿವ ಎಂ.ಬಿ.ಪಾಟೀಲ, ‘ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಕಂಡು ಗೋವಾ ಸಚಿವರು ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ. ಅವರೆಳುತ್ತಿರುವುದು ಸುಳ್ಳು’ ಎಂದು ಪ್ರತಿಕ್ರಿಯಿಸಿದ್ದರು.

ಗೋವಾ ಸಚಿವರ ಅತಿರೇಕದ ಹೇಳಿಕೆಗಳಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಚ್ಚಿದ ವಿವಾದದ ಬೆಂಕಿಯೇ ಕಾರಣವೆಂದು ಪಾಟೀಲರು ಆರೋಪಿಸಿದ್ದಾರೆ.

ಮಹದಾಯಿ ನದಿಪಾತ್ರದಲ್ಲಿ ಕರ್ನಾಟಕ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ಕುರಿತ ವಿಚಾರವನ್ನು ಫೆಬ್ರುವರಿ ಮೊದಲ ವಾರದಲ್ಲಿ ನ್ಯಾಯಾಧೀಕರಣ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry