ಹರಿದು ಬಂತು ಹೊರೆ ಕಾಣಿಕೆ

7

ಹರಿದು ಬಂತು ಹೊರೆ ಕಾಣಿಕೆ

Published:
Updated:

ಉಡುಪಿ: ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅವರ ದ್ವಿತೀಯ ಪರ್ಯಾ ಯದ ಅಂಗವಾಗಿ ವಿವಿಧ ಸಂಘಟನೆ, ಸಂಸ್ಥೆಗಳು, ಸ್ಥಳೀಯಾಡಳಿತ ಸಂಸ್ಥೆಗ ಳಿಂದ ಭಾರಿ ಪ್ರಮಾಣದ ಹೊರೆಕಾಣಿಕೆ ಸಂದಾಯವಾಗಿದೆ.

ಭಕ್ತಿ ಮತ್ತು ಪ್ರೀತಿಯಿಂದ ಭಕ್ತರು ನೀಡಿರುವ ಹೊರೆಕಾಣಿಕೆಯನ್ನು ಹಾಳಾ ಗದಂತೆ ಸುರಕ್ಷಿತವಾಗಿ ಇಡುವ ನಿಟ್ಟಿನಲ್ಲಿ ರಾಜಾಂಗಣ ಪಾರ್ಕಿಂಗ್ ಪರಿಸರದಲ್ಲಿ ಸುಮಾರು 150x40 ಚದರ ಅಡಿಯಲ್ಲಿ ಬೃಹತ್ ಪೆಂಡಾಲ್‌ ನಿರ್ಮಾಣ ಮಾಡಲಾಗಿದೆ. ವ್ಯವಸ್ಥಿತವಾಗಿ ಅಲ್ಲಿ ಜೋಡಿಸಲಾಗುತ್ತಿದೆ. ಸುಮಾರು 1,500 ಕ್ವಿಂಟಲ್ ಅಕ್ಕಿ, 25,000 ತೆಂಗಿನ ಕಾಯಿ, ತರಕಾರಿ, ಬಾಳೆ ಹಣ್ಣು, ಬೆಲ್ಲ, ಎಣ್ಣೆ ಈಗಾಗಲೇ ಉಗ್ರಾಣ ಸೇರಿವೆ.

ಜನವರಿ 4ರಂದು ವಿದ್ಯಾಧೀಶ ಸ್ವಾಮೀಜಿ ಅವರು ಹೊರೆ ಕಾಣಿಕೆ ಸ್ವೀಕಾರ ಕಾರ್ಯಕ್ಕೆ ಚಾಲನೆ ನೀಡಿದ್ದರು. ಕಾರ್ಕಳ ಮುನಿಯಾಲು ಬಳಗ, ಚಂದ್ರಾಪುರ ಮಠ, ಹವ್ಯಕ ಸಮಾಜ ರಾಜಸ್ತಾನ ಸಂಘಟನೆ, ವಿಶ್ವಕರ್ಮ ಸಮಾಜ, ಕನಕದಾಸ ಭಕ್ತರ ಸಂಘ, ಜೋಗಿ ಸಮಾಜ, ಮೂಡು ಸಗ್ರಿ ದುರ್ಗಾ ಪರಮೇಶ್ವರಿ ಗದ್ದಿಗೆ, ನಗರ ಸಭಾ ಸದಸ್ಯರು, ಕರ್ಣಾಟಕ ಬ್ಯಾಂಕ್, ಸ್ಥಾನಿಕ ಬ್ರಾಹ್ಮಣ ಸಮಾಜ, ಬಿಗ್ ಬಜಾರ್, ಉಡುಪಿ ಜಿಲ್ಲಾ ಬ್ರಾಹ್ಮಣರ ಮಹಾ ಸಭಾ–32, ಶ್ರೀ ಅನಂತ ಪದ್ಮನಾಭ ಸನ್ನಿಧಿ, ಹೆಬ್ರಿ ಗ್ರಾಮಸ್ಥರು, ಬ್ರಹ್ಮಾವರ ಬೈಕಾಡಿ ವಲಯದ ವಿಜಯ ಬ್ಯಾಂಕ್, ಇಸ್ಕಾನ್ ಕಲ್ಸಂಕ, ಮುಸ್ಲಿಂ ಬಾಂಧವರು, ಪಾಡಿಗಾರು, ಕರಂಬಳ್ಳಿ, ಗುಂಡಿಬೈಲು ವಲಯ ಇಸ್ಕಾನ್, ರಾಮಕ್ಷತ್ರೀಯ ಸಮಾಜ, ಉಡುಪಿ, ಕುಂದಾಪುರ, ಆನೆಗುಡ್ಡೆ, ದೈವಜ್ಞ ಬ್ರಾಹ್ಮಣರ ಸಂಘ ಉಡುಪಿ, ಕಟೀಲು, ಮೂಡುಬಿದ್ರಿ, ಕಳತ್ತೂರು ಎಲ್ಲೂರು ಇನ್ನಾರು, ಮುಂಡ್ಕೂರು, ಬೆಳ್ಮಣ್, ಕಾಪು, ಅದಮಾರು ಗ್ರಾಮಸ್ಥರು ಹೊರೆ ಕಾಣಿಕೆಯನ್ನು ಸಲ್ಲಿಸಿದ್ದಾರೆ.

ಈಗಾಗಲೇ ಹಸಿರು ಹೊರೆಕಾಣಿಕೆ ರೂಪದಲ್ಲಿ ಬಂದಿರುವ ತರಕಾರಿಗಳನ್ನು ಶ್ರೀ ಕೃಷ್ಣ ಮಠದ ಅನ್ನ ಸಂತರ್ಪಣೆಗೆ ನೀಡಲಾಗುತ್ತಿದೆ. ಘನ ರೂಪದ ಹಾಗೂ ಹೆಚ್ಚು ಸಮಯದವರೆಗೆ ಸಂರಕ್ಷಿಸಲು ಅವಕಾಶ ಇರುವುದನ್ನು ಉಗ್ರಾಣದಲ್ಲಿ ಸುರಕ್ಷಿತವಾಗಿ ಇಡಲಾಗುತ್ತಿದೆ.

ಉಡುಪಿ ಜಿಲ್ಲಾ ಬ್ರಾಹ್ಮಣರ ಪರಿಷತ್‌ ಮಹಿಳೆಯರು ಹೊರೆ ಕಾಣಿಕೆಯ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಬಂದಿರುವ ಹೊರೆ ಕಾಣಿಕೆಯನ್ನು ಪ್ರತ್ಯೇಕಿಸುವ ಹಾಗೂ ವ್ಯವಸ್ಥಿತವಾಗಿ ಜೋಡಿಸಲು ಶ್ರೀ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಮಹಿಳೆಯರು ಸಾಥ್‌ ನೀಡುತ್ತಿದ್ದಾರೆ. ಪ್ರತಿ ನಿತ್ಯ 25 ಮಂದಿಯ 2 ತಂಡಗಳು ಕಾರ್ಯನಿ ರ್ವಹಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry