‘ಹರನಿಗೆ ಗೌರವ, ದೇವನಿಗೆ ಪೂಜೆ’

7

‘ಹರನಿಗೆ ಗೌರವ, ದೇವನಿಗೆ ಪೂಜೆ’

Published:
Updated:

ಕೂಡಲಸಂಗಮ: ಶಿವ ಬೇರೆ, ದೇವ ಬೇರೆ, ಶಿವ ಗಂಗೆ, ಗೌರಿ ವಲ್ಲಭ, ಕೈಲಾv ಸಾಧಿಪತಿ. ಆದರೆ ದೇವರು ನಿರಾಕಾರ, ನಿರ್ಗುಣನಾದವನು. ಅವನು ಪಶು ಪಕ್ಷಿ ಆಕಾರದವನಲ್ಲ, ನಾವು ಹರನನ್ನು ಗೌರವಿಸುತ್ತೇವೆ, ಪೂಜಿಸುವುದು ಮಾತ್ರ ದೇವನನ್ನು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.

ಕೂಡಲಸಂಗಮದಲ್ಲಿ ನಡೆದ 31ನೇ ಶರಣ ಮೇಳದ ನಾಲ್ಕನೇ ದಿನ ಭಾನುವಾರ ರಾತ್ರಿ ನಡೆದ ಸಾಮೂಹಿಕ ಇಷ್ಟಲಿಂಗಾರ್ಚನೆ ಸಮಾ ರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಲಿಂಗಾಯತ ಧರ್ಮಕ್ಕೆ ಯೋಗಿ ಶಿವನ ಕೊಡುಗೆ ಇದೆ. ಅಷ್ಟಾವರಣಗಳಲ್ಲಿ ಮೂರು ವಿಭೂತಿ, ರುದ್ರಾಕ್ಷಿ, ಮಂತ್ರ ಶಿವನಿಂದ ಬಂದಿವೆ, ಇನ್ನೂ ಐದು ಬಸವಣ್ಣನವರೇ ಕೊಟ್ಟಿದ್ದಾರೆ. ಕೆಲವು ಧರ್ಮಗಳ ಗುರುಗಳು ಶಿಷ್ಯರನ್ನು ಹುಡುಕಿಕೊಂಡು ಹೋಗುವ ಕಾಲ ಇತ್ತು. ಆದರೆ ಬಸವಣ್ಣನವರ ಕಾಲದಲ್ಲಿ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ಬೇರೆ, ಬೇರೆ ಕಡೆಯಿಂದ ಶರಣರು ಹರಿದು ಬಂದರು ಎಂದರು.

ವೈದಿಕ ವ್ಯವಸ್ಥೆ ಅಕ್ಟೋಪಸ್ ಇದ್ದಂತೆ. ನಿಮ್ಮನ್ನು ಜೋತಿಷ, ಪಂಚಾಂಗ ಹೇಳಿ ನಂಬಿಸಿ ಕಟ್ಟಿ ಹಾಕಿದೆ ವಾಸ್ತು, ಪಂಚಾಂಗ, ಜೋತಿಷವನ್ನು ಎಂತದ್ದೇ ಪರಿಸ್ಥಿತಿಯಲ್ಲಿ ನಂಬಲೇಬಾರದು. ಸತ್ಯದ ದಾರಿ ಕಠಿಣ ಆಗಿದೆ ಎಂದು ಸುಳ್ಳಿನ ದಾರಿ ತುಳಿಯಬಾರದು ಎಂದರು.

ಬಸವಣ್ಣನವರ ತತ್ವದಲ್ಲಿ ಅದ್ಬುತ ಶಕ್ತಿ ಇದೆ. ಇದನ್ನು ದೃಢ ವಾಗಿ ನಂಬಿ ಸಮಾಜದಲ್ಲಿದ್ದ ಸಂಪ್ರ ದಾಯಗಳನ್ನು ತೊಡೆದು ಹಾಕಿ ಮಹಿಳೆಯರಿಗೆ ಮಠಗಳಲ್ಲಿ ಆಶ್ರಯ ಕೊಟ್ಟು, ಮಠಾಧೀಶರನ್ನಾಗಿ ಮಾಡಿದ ಲಿಂಗಾನಂದ ಸ್ವಾಮೀಜಿ, ಹಲವಾರು ತೊಂದರೆ ಅನುಭವಿಸಿದರು, ದಾವಣ ಗೇರಿ ಮಠ ಕಳೆದು ಕೊಳ್ಳಬೇಕಾಯಿತು, ಸ್ಥಾವರಕ್ಕಳಿ ಯುಂಟು ಜಂಗಮಕ್ಕೆ ಅಳಿವಿಲ್ಲ ಎಂದು ನಂಬಿ ಪ್ರವಚನದ ಮೂಲಕ ಬಸವ ಧರ್ಮ ಪೀಠವನ್ನು ಕಟ್ಟಿ ನೂರಾರು ಸಾಧಕಿಯರಿಗೆ ಆಶ್ರಯ ಕೊಟ್ಟರು ಎಂದರು.

ಸಮಾರಂಭದಲ್ಲಿ ಮಾತೆ ಗಂಗಾ ದೇವಿ, ಬಸವಕುಮಾರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಸಿದ್ಧರಾಮೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಚನ್ನಬಸವರಾಜ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಮಾತೆ ಸತ್ಯಾದೇವಿ ಮುಂತಾದವರು ಇದ್ದರು.

ಬೃಹತ್ ಬಸವ ಪಥ ಸಂಚಲನ: ಭಾನುವಾರ ಸಂಜೆ 6ಕ್ಕೆ ಕೂಡಲಸಂಗಮದ ಬಸವೇಶ್ವರ ಐಕ್ಯ ಮಂಟಪದಿಂದ ಬಸವ ಧರ್ಮ ಪೀಠದ ಮಹಾಮನೆಯವರೆಗೆ ಬೃಹತ್ ಪಥ ಸಂಚಲನ ಸಮಾರಂಭ ನಡೆಯಿತು.

ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಬಸವಣ್ಣ ಐಕ್ಯ ಸ್ಥಳಕ್ಕೆ ಪೂಜೆ ಸಲ್ಲಿಸಿ ಪಥ ಸಂಚಲನಕ್ಕೆ ಚಾಲನೆ ಕೊಟ್ಟರು, ವಿವಿಧ ರಾಜ್ಯದಿಂದ ಬಂದ ಸಾವಿರಾರು ಶರಣ ಶರಣೆಯರು ವಚನಗಳಿಗೆ ಜಯಕಾರ, ವಚನಗಳನ್ನು ಹಾಡಿ ನಲಿದರು, 7 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಪ್ರಾರ್ಥನೆ ಮಾಡಿದರು.

ಪೀಠಾರೋಹಣ

ಕೂಡಲಸಂಗಮ: ಪ್ರಜಾಪ್ರಭುತ್ವದ ತಾಯಿ ಬ್ರಿಟನ್ ಆದರೂ ಅದರಿಗಿಂತ ಪೂರ್ವದಲ್ಲಿಯೇ ಬಸವಣ್ಣನವರು 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಮುಖ್ಯ ಮೂರು ಲಕ್ಷಣಗಳಾದ ವಿಚಾರ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಆಚಾರ ಸ್ವಾತಂತ್ರ್ಯವನ್ನು ಜನರಿಗೆ ನೀಡಿದ್ದರು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಡಾ.ಮಾತೆ ಮಹಾದೇವಿ ಹೇಳಿದರು.

ಕೂಡಲಸಂಗಮದಲ್ಲಿ ನಡೆದ 31ನೇ ಶರಣ ಮೇಳದ 3 ದಿನವಾದ ಶನಿವಾರ ರಾತ್ರಿ ನಡೆದ ಬಸವ ಧರ್ಮ ಪೀಠದ 26ನೇ ಪೀಠಾರೋಹಣ ಸಮಾರಂಭದಲ್ಲಿ ಪೀಠಾರೋಹಣ ಮಾಡಿ ಮಾತನಾಡಿದರು,

ಕೆಲವು ಸಾಹಿತಿಗಳ ತಪ್ಪು ಮಾಹಿತಿಯಿಂದ ಬಸವಣ್ಣನವರ ಕಾಲವನ್ನು 32 ವರ್ಷಕ್ಕೆ ಸಂಕುಚಿತ ಗೊಳಿಸುತ್ತಿರುವುದು ಸರಿಯಲ್ಲ. ಬಸವಣ್ಣನವರ ಕಾಲ 62 ವರ್ಷ ,3 ತಿಂಗಳು, 2 ದಿನ ಇದನ್ನು ಎಲ್ಲರೂ ಸ್ವಷ್ಟವಾಗಿ ಅರ್ಥಮಾಡಿ ಕೊಳ್ಳಬೇಕು. ಇದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ನೀಡಲು ನಾನು ಸಿದ್ಧ ಎಂದು ಹೇಳಿದರು.

ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಗಂಗಾದೇವಿ, ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಗುರುರಾಜ ಹೂಗಾರ ಮಾತನಾಡಿದರು.

ಬಸವ ಧರ್ಮ ಧ್ವಜಾರೋಹಣವನ್ನು ಮಹಾರಾಷ್ಟ್ರದ ಗಡಹಿಂಗ್ಲಜದ ಕೃಷ್ಣಪ್ಪ ಮುಸಳೆ ಮಾಡಿದರು. ಹಾವೇರಿಯ ಡಾ.ರಾಜಣ್ಣ ವೈದ್ಯ, ಬೆಂಗಳೂರು ವಿವಿಯ ಬಿ.ಕೆ.ರವಿ, ಬಿ.ಶಿವಣ್ಣ, ಜಯಣ್ಣ, ಮಧುಸೂಧನ ಮಾಗಿ, ಜಯಶ್ರೀ ಮಾಗಿ, ಸಾಯಿ ಕುಮಾರ ಹಿಳ್ಳಿ, ಹೈದರಾಬಾದದ ಧನರಾಜ್ ಜೀರಗೆ, ಜಹೀರಾಬಾದದ ಶಂಕರಪ್ಪ ಪಾಟೀಲ, ಬಸವ ಧರ್ಮ ಪೀಠದ ಜಂಗಮ ಮೂರ್ತಿಗಳು, ಗಣನಾಯಕ, ನಾಯಕಿಯರು ಇದ್ದರು.

ಸನ್ಮಾನ: ಉಳವಿಯನ್ನು ಅಭಿವೃದ್ಧಿ ಪಡಿಸಿದ ಬೈಲಹೊಂಗಲದ ಸುಧೀರ ವಾಲಿ ಹಾಗೂ ವೈದಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಂಗಳೂರಿನ ಹೂಗಾರ್ ಹೋಮಿಯೋಪತಿ ಆಸ್ಪತ್ರೆಯ ಡಾ. ಬಸವರಾಜ್ ಹೂಗಾರ ಅವರಿಗೆ 2018ರ ಶರಣ ಸೇವಾರತ್ಬ ಪ್ರಶಸ್ತಿ ನೀಡಿ ಸತ್ಕರಿಸಿದರು.

* * 

ಧರ್ಮ ಪ್ರಸಾರಕ್ಕಾಗಿ ಬಸವಣ್ಣನವರು ಜಂಗಮರನ್ನು ತಯಾರು ಮಾಡಿದರು. ಬುದ್ಧ ನಂತರ ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದ್ದು ಇತಿಹಾಸ

ಮಾತೆ ಮಹಾದೇವಿ ಬಸವಧರ್ಮ ಪೀಠ, ಕೂಡಲಸಂಗಮ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry