ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಠಾಣೆಗೆ ರೈತರ ಮುತ್ತಿಗೆ

Last Updated 16 ಜನವರಿ 2018, 8:38 IST
ಅಕ್ಷರ ಗಾತ್ರ

ಲೋಕಾಪುರ: ಕೂಡಲ ಸಂಗಮಕ್ಕೆ ತೆರಳುತ್ತಿದ್ದ ವಾಹನವನ್ನು ತಡೆಹಿಡಿದಿ ದ್ದಕ್ಕೆ ರೈತ ಸಂಘದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಕೂಡಲ ಸಂಗಮದಲ್ಲಿ ನಡೆಯುವ ಜನಸಾಮಾನ್ಯ ಪಕ್ಷ ಉದ್ಘಾಟನೆಗೆ ಹೊರಟಿದ್ದ ಬೆಳಗಾವಿ ಜಿಲ್ಲೆಯ ಸುತಗಟ್ಟಿ ಗ್ರಾಮದ ಜನರಿದ್ದ ವಾಹನದಲ್ಲಿ ಅಧಿಕ ಪ್ರಮಾಣದ ಜನರನ್ನು ಸಾಗಿಸುತ್ತಿದ್ದನ್ನು ಕಂಡ ಬೆಳಗಾವಿ ಉತ್ತರವಲಯ ಪೊಲೀಸ್ ಮಹಾನಿರ್ದೇಶಕ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿದ್ದರು.

ಅವರ ನಿರ್ದೇಶನದಂತೆ ಸ್ಥಳೀಯ ಪೊಲೀಸರು ವಾಹನವನ್ನು ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದರು. ಮುಧೋಳ ಕಡೆಯಿಂದ ಕೂಡಲ ಸಂಗಮಕ್ಕೆ ತೆರಳುತ್ತಿದ್ದ ರೈತ ಸಂಘದ ಪ್ರತಿ ನಿಧಿಗಳು ಪೊಲೀಸರ ವರ್ತನೆ ವಿರೋಧಿಸಿ ವಾಹನ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದರು. ಸುಮಾರು 2 ಗಂಟೆ ಹೆದ್ದಾರಿ ಬಂದ್ ಆಗಿದ್ದರಿಂದ ಪ್ರಯಾಣಿಕರು ಪರ ದಾಡುವಂತಾಯಿತು. ಸ್ಥಳೀಯರು ಮತ್ತು ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆದ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಪ್ರಭಾರ ಪಿ.ಎಸ್.ಐ. ಶಿವಯೋಗಿ ಲೋಹಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT