ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ಪ್ರೀತಿ ಜಾಗೃತಗೊಳಿಸಿದ ಸಿದ್ಧರಾಮೇಶ್ವರ

Last Updated 16 ಜನವರಿ 2018, 8:52 IST
ಅಕ್ಷರ ಗಾತ್ರ

ಬೀದರ್: ‘ಇಷ್ಟಲಿಂಗ ಕಟ್ಟಿಕೊಂಡರೆ ಸಮಾಜದಲ್ಲಿ ದೊಡ್ಡವರಾಗಲು ಸಾಧ್ಯವಿಲ್ಲ. ಶರಣರ ತತ್ವ ಹಾಗೂ ವಿಚಾರಗಳನ್ನು ಅನುಷ್ಠಾನ ಗೊಳಿಸಿದವರು ಮಾತ್ರ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಶರಣರ ಕಾಯಕ ತತ್ವದ ಮೂಲಕವೇ ಸಿದ್ಧರಾಮೇಶ್ವರರು ಕರ್ಮಯೋಗಿ ಆಗಿ ಗುರುತಿಸಿಕೊಂಡಿದ್ದಾರೆ’ ಎಂದು ಸಾಹಿತಿ ಸೋಮನಾಥ ಯಾಳವಾರ ಅಭಿಪ್ರಾಯಪಟ್ಟರು.

ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಿದ್ಧರಾಮೇಶ್ವರ ಜನ್ಮ ಸ್ಥಳ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸೊನ್ನಲಗಿ. 800 ವರ್ಷಗಳು ಕಳೆದರೂ ಇತಿಹಾಸ ಮಾಸಿಲ್ಲ. ಸೊಲ್ಲಾಪುರ ಸಿದ್ಧರಾಮೇಶ್ವರರ ಕರ್ಮಭೂಮಿಯಾಗಿದೆ. ಬಾಲಕನಾಗಿ ಮಾಡಿದ ಸಾಧನೆ, ಶ್ರೀಶೈಲದ ಪ್ರಯಾಣ ಹಾಗೂ ಅಲ್ಲಂ ಪ್ರಭುವಿನ ಭೇಟಿಯ ನಂತರದ ಆಧ್ಯಾತ್ಮಿಕ ಸಾಧನೆ ಹೀಗೆ ಮೂರು ಘಟ್ಟಗಳಲ್ಲಿ ಸಿದ್ಧರಾಮೇಶ್ವರರ ಚರಿತ್ರೆಯನ್ನು ಕಾಣಬಹುದಾಗಿದೆ’ ಎಂದು ತಿಳಿಸಿದರು.

‘ಸಿದ್ಧರಾಮೇಶ್ವರರು ಸಾಮಾಜಿಕ ಕಾರ್ಯಗಳ ಮೂಲಕ ಸೊನ್ನಲಗಿಗೆ ಪಟ್ಟಣದ ರೂಪ ನೀಡಿದರು. ಭೂಲೋಕದಲ್ಲೇ ಕೈಲಾಸ ಇರುವುದನ್ನು ತೋರಿಸಿದರು. ಮನುಷ್ಯನೊಳಗೆ ಕೈಲಾಸ ಇರುವುದನ್ನು ಪ್ರತಿಪಾದಿಸಿದರು. ಕೆರೆ, ಬಾವಿಗಳನ್ನು ಕಟ್ಟಿಸುವುದರ ಜತೆಗೆ ಎಲ್ಲ ದಾನಗಳನ್ನೂ ಮಾಡಿಸಿದರು. ಅವರ ಜನಪ್ರಿಯತೆ ಉತ್ತುಂಗಕ್ಕೆ ತಲುಪಿದಾಗ ರಾಜಕಾರಣಿಗಳೂ ಅವರ ಹಿಂದೆ ಸಾಗಿದರು’ ಎಂದು ಹೇಳಿದರು.

‘ಬಸವೇಶ್ವರ ಹಾಗೂ ಸಿದ್ಧರಾಮೇಶ್ವರರು ಸಮಾಜದ ಎರಡು ಕಣ್ಣುಗಳು ಇದ್ದಂತೆ. ಬಸವೇಶ್ವರರ ಬಗೆಗೆ ಉಲ್ಲೇಖಿಸುವ 5, 6 ಶಾಸನಗಳು ಮಾತ್ರ ಇವೆ. ಆದರೆ ಸಿದ್ಧರಾಮೇಶ್ವರ ಕುರಿತು 1190 ರಿಂದ 1300ರ ವರೆಗೂ ದತ್ತಿಕೊಟ್ಟರುವ ಶಾಸನಗಳು ಕಾಣಸಿಗುತ್ತವೆ. ಬಸವಣ್ಣ ನವರು ಕಾಯಕವನ್ನು ಪ್ರತಿಪಾದಿಸಿದರೆ, ಸಿದ್ಧರಾಮೇಶ್ವರ ಅವರು ಕಾಯಕ ಪ್ರೀತಿಯನ್ನು ಜಾಗೃತಗೊಳಿಸಿದರು’ ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಜನಕಲ್ಯಾಣಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟ ಸಿದ್ಧರಾಮೇಶ್ವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಉದ್ಘಾಟಿಸಿದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಮಾಣಿಕರಾವ್ ವಾಡೇಕರ್ ಇದ್ದರು. ಚೆನ್ನಬಸವ ಹೇಡೆ ನಿರೂಪಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾದ ಸಿದ್ಧರಾಮೇಶ್ವರ ಭಾವಚಿತ್ರದ ಮೆರವಣಿಗೆಯು ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಜನರಲ್‌ ಕಾರ್ಯಪ್ಪ ವೃತ್ತ ಹಾಗೂ ರೋಟರಿ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗ ಮಂದಿರಕ್ಕೆ ತಲುಪಿತು.
ಮೆರವಣಿಗೆ ಯುದ್ದಕ್ಕೂ ಧ್ವನಿವರ್ಧಕಗಳಲ್ಲಿ ಭಕ್ತಿ ಗೀತೆಗಳು ಮೊಳಗಿದವು. ಯುವಕರು ಕುಣಿದು ಸಂಭ್ರಮಿಸಿದರು. ಕೆಲ ಗಣ್ಯರು ಕೂಡ ಹೆಜ್ಜೆ ಹಾಕಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು.

ಜಿಲ್ಲಾಧಿಕಾರಿ ಕಚೇರಿ: ಮಹತ್ಮಾ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಉದ್ಘಾಟಿಸಿದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌ ಅವರು ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ಇದೇ

* * 

ರಾಜಕಾರಣಿಗಳು ಪ್ರಭಾವ ಹೆಚ್ಚಿಸಿಕೊಳ್ಳಲು ಸ್ವಾಮಿಗಳ ಬಳಿ ಬರುತ್ತಿದ್ದರು. ಇಂದು ಅಧಿಕಾರದಲ್ಲಿರುವವರ ಬಳಿ ಹೋಗುವ ಸ್ವಾಮಿಗಳು ಹೆಚ್ಚಾಗುತ್ತಿದ್ದಾರೆ.
ಸೋಮನಾಥ ಯಾಳವಾರ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT