‘ಮಗುವಿಗೆ ಸಮಯ ಇಲ್ಲ’

7

‘ಮಗುವಿಗೆ ಸಮಯ ಇಲ್ಲ’

Published:
Updated:
‘ಮಗುವಿಗೆ ಸಮಯ ಇಲ್ಲ’

ಐಶ್ವರ್ಯಾ ರೈ ಬಚ್ಚನ್‌, ಶಿಲ್ಪಾ ಶೆಟ್ಟಿ, ರಾಣಿ ಮುಖರ್ಜಿ... ಹೀಗೆ ಬಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡಿದ ನಟಿಯರು ಈಗ ‘ಸೆಲೆಬ್ರೆಟಿ ಅಮ್ಮ’ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ವಿದ್ಯಾ ಬಾಲನ್ ಮಾತ್ರ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದು, ಈಚೆಗೆ ಇವರ ಅಭಿನಯದ ‘ತುಮ್ಹಾರಿ ಸುಲು’ ಚಿತ್ರ ಹೆಚ್ಚು ಪ್ರಶಂಸೆಗೆ ಒಳಗಾಗಿತ್ತು.

ಐದು ವರ್ಷಗಳ ಹಿಂದೆ ಉದ್ಯಮಿ ಸಿದ್ಧಾರ್ಥ್‌ ರಾಯ್‌ ಕಪೂರ್‌ ಅವರನ್ನು ಮದುವೆಯಾಗಿರುವ ವಿದ್ಯಾ ಬಾಲನ್‌ಗೆ ಈಚೆಗೆ ಯಾರೋ ಮಗುವಿನ ಬಗ್ಗೆ ಪ್ರಶ್ನೆ ಮಾಡಿದರು. ‘ನನಗೆ ಮಗು ಪಡೆಯುವ ಬಗ್ಗೆ ಯೋಚಿಸಲೂ ಸಮಯ ಸಿಗುತ್ತಿಲ್ಲ. ಆದರೆ ಪ್ರತಿ ಸಿನಿಮಾ ಮಾಡಿದಾಗಲೂ ಅದನ್ನು ನನ್ನ ಮಗುವೆಂದು ಭಾವಿಸುತ್ತೇನೆ. ನನಗೆ 20 ಮಕ್ಕಳಿದ್ದಾರೆ’ ಎಂದು ನಕ್ಕು ಉತ್ತರಿಸಿದ್ದಾರೆ.

‘ಸದ್ಯ ನಾನು ಉತ್ತಮ ರೀತಿಯಲ್ಲಿ ಹೆಚ್ಚೆಚ್ಚು ಕೆಲಸ ಮಾಡಲು ಕಾತರಳಾಗಿದ್ದೇನೆ. ಅಂದಿನ ದಿನವನ್ನು ಖುಷಿಯಿಂದ ಅನುಭವಿಸಿ’ ಎಂಬುದು 2018ರ ನನ್ನ ಸಂಕಲ್ಪ’ ಎಂದು ಹೇಳಿಕೊಂಡಿದ್ದಾರೆ ವಿದ್ಯಾ.

ಈಗ ವಿದ್ಯಾಗೆ 39ರ ವರ್ಷ. 40 ತುಂಬುವುದರೊಳಗೆ ಜೀವನದಲ್ಲಿ ಏನಾದರೂ ಕ್ರೇಜಿ ಎನಿಸುವಂಥ ಕೆಲಸ ಮಾಡಬೇಕು ಎಂಬ ಮನದ ಆಸೆಯನ್ನು ಹಂಚಿಕೊಂಡಿದ್ದಾರೆ.

ವಿದ್ಯಾ ಇದೀಗ ಸಾಗರಿಕಾ ಘೋಷ್‌ ಬರೆದಿರುವ ಪುಸ್ತಕವನ್ನು ಆಧರಿಸಿದ ಚಿತ್ರವೊಂದರಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸುವ ತಯಾರಿಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry