72ರ ಮಾಂತ್ರಿಕ

7

72ರ ಮಾಂತ್ರಿಕ

Published:
Updated:
72ರ ಮಾಂತ್ರಿಕ

ಅರ್ಥವತ್ತಾದ, ಭಾವಪೂರ್ಣ ಹಾಡುಗಳನ್ನು ರಚಿಸಿ ಮನಗೆದ್ದವರು ಜಾವೇದ್‌ ಅಕ್ತರ್‌. ಜನವರಿ 17 1945ರಲ್ಲಿ ಜಾವೇದ್‌ ಹುಟ್ಟಿದ್ದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ. ಉರ್ದು ಹಾಗೂ ಹಿಂದಿಯಲ್ಲಿ ಇವರು ಸಾಕಷ್ಟು ಹಾಡುಗಳನ್ನು ರಚಿಸಿದ್ದಾರೆ.

ಬಿ.ಎ. ವ್ಯಾಸಂಗ ಮುಗಿಸಿ 1964ರಲ್ಲಿ ಮುಂಬೈಗೆ ಕಾಲಿಟ್ಟು ಸಣ್ಣಪುಟ್ಟ ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅವರ ತಂದೆ ಜಾನ್‌ ನಿಸಾರ್‌ ಅಕ್ತರ್‌ ಕೂಡ ಕವಿಯಾಗಿದ್ದರು. ತಂದೆಯ ಹಾದಿಯಲ್ಲಿಯೇ ಸಾಗಿದ ಜಾವೇದ್ ಸಿನಿಮಾ ಚಿತ್ರಕಥೆ ಬರೆಯುವುದರೊಟ್ಟಿಗೆ ಹಾಡುಗಳ ರಚನೆಯಲ್ಲಿಯೂ ತೊಡಗಿಕೊಂಡು ಸೈ ಎನಿಸಿಕೊಂಡರು. ಅನೇಕ ಪ್ರಶಸ್ತಿಗಳು ಬಂದಿರುವುದು ಅವರ ಕವನ ರಚನಾ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry