ಹಿರೀಕರ ಆರೋಗ್ಯಕ್ಕಾಗಿ...

7

ಹಿರೀಕರ ಆರೋಗ್ಯಕ್ಕಾಗಿ...

Published:
Updated:
ಹಿರೀಕರ ಆರೋಗ್ಯಕ್ಕಾಗಿ...

ಕೈತೋಟದ ಕೆಲಸಗಳಲ್ಲಿ ಭಾಗಿ ಆಗುವುದು ಹಿರಿಯ ನಾಗರಿಕರನ್ನು ಚಟುವಟಿಕೆಯಿಂದ ಇರುವಂತೆ ಮಾಡುವುದಷ್ಟೇ ಅಲ್ಲದೆ ಅವರ ಆರೋಗ್ಯವನ್ನೂ ವೃದ್ಧಿಸುತ್ತದೆ. ಮಾನಸಿಕ ಸಾಮರ್ಥ್ಯವನ್ನೂ ವೃದ್ಧಿಸುತ್ತದೆ ಎಂದು ಇತ್ತೀಚೆಗೆ ನಡೆಸಲಾದ ಅಧ್ಯಯನದಿಂದ ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಂಶೋಧನೆಯನ್ನು ಜರ್ಮನಿಯ ಸಂಸ್ಥೆಯೊಂದು ನಡೆಸಿತ್ತು.

ದಿನಕ್ಕೆ ಮೂರು ಗಂಟೆಗಿಂತಲೂ ಹೆಚ್ಚಿನ ಸಮಯ ಮನೆಗೆಲಸದಲ್ಲಿ ತೊಡಗಿಕೊಳ್ಳುವುದು ಹಾಗೂ ಏಳು ಗಂಟೆಗೂ ಕಡಿಮೆ ಸಮಯ ನಿದ್ದೆ ಮಾಡುವ ವಯಸ್ಕ ಮಹಿಳೆಯರು ಆರೋಗ್ಯ ಸಮಸ್ಯೆಯನ್ನು ಹೆಚ್ಚು ಅನುಭವಿಸುತ್ತಾರೆ. ಆದರೆ ಪುರುಷರ ವಿಷಯದಲ್ಲಿ ಇಷ್ಟೇ ನಿದ್ದೆ ಹಾಗೂ ಚಟುವಟಿಕೆಯ ಅವಧಿ ಯಾವುದೇ ರೀತಿಯಲ್ಲಿಯೂ ಕೆಟ್ಟ ಪರಿಣಾಮ ಬೀರುವುದಿಲ್ಲ ಎನ್ನುವ ಅಂಶ ಸಂಶೋಧನೆಯಲ್ಲಿ ಬೆಳಕಿಗೆ ಬಂದಿತ್ತು.

ಮಹಿಳೆಯರು ದಿನದ ಹೆಚ್ಚಿನ ಸಮಯ ಅಡುಗೆ ಮಾಡುವುದು, ಸ್ವಚ್ಛ ಮಾಡುವುದು ಮುಂತಾದ ಕೆಲಸವನ್ನು ಪುನರಾವರ್ತಿಸುತ್ತಾರೆ. ಆದರೆ ಪುರುಷರು ಕೈತೋಟ, ಮನೆ ನಿರ್ವಹಣಾ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಪುರುಷರು ಮಾಡುವ ಈ ಕೆಲಸಗಳು ಉತ್ತೇಜನಕಾರಿ ಆಗಿರುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯಪೂರ್ಣವಾಗಿರುತ್ತಾರೆ ಎನ್ನುವುದು ಸಂಶೋಧಕರ ಮಾತು. ಸಂಶೋಧಕರು 36 ಸಾವಿರ ನಿವೃತ್ತ ವಯಸ್ಕರನ್ನು ಸಂದರ್ಶಿಸಿದ್ದರು. ವಯಸ್ಕರ ದಿನನಿತ್ಯದ ಚಟುವಟಿಕೆಗಳು, ಅವರ ಆರೋಗ್ಯದ ಕುರಿತಾದ ಪ್ರಶ್ನಾವಳಿಗಳಿಗೆ ಉತ್ತರ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry