ಜೊತೆಯಾದರು ಶ್ರದ್ಧಾ, ರಾಜ್‌ಕುಮಾರ್‌

7

ಜೊತೆಯಾದರು ಶ್ರದ್ಧಾ, ರಾಜ್‌ಕುಮಾರ್‌

Published:
Updated:
ಜೊತೆಯಾದರು ಶ್ರದ್ಧಾ, ರಾಜ್‌ಕುಮಾರ್‌

ಮೊದಲ ಬಾರಿ ನಟಿ ಶ್ರದ್ಧಾ ಕಪೂರ್‌ ಮತ್ತು ರಾಜ್‌ಕುಮಾರ್‌ ರಾವ್‌ ತೆರೆ ಹಂಚಿಕೊಳ್ಳಲು ತಯಾರಾಗಿದ್ದಾರೆ. ಇವರಿಬ್ಬರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

‘ರಾಜ್‌ಕುಮಾರ್‌ ರಾವ್‌ ಜೊತೆಗೆ ನಟಿಸುತ್ತಿರುವುದು ಖುಷಿ ವಿಚಾರ. ನಾನು ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ’ ಎಂದಿದ್ದಾರೆ ಶ್ರದ್ಧಾ. ಇದರಲ್ಲಿ ಇವರು ಚಿಕ್ಕ ಪಟ್ಟಣದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಹಾಸ್ಯ ಸನ್ನಿವೇಶಗಳ ಜೊತೆಗೆ ಹಾರರ್ ದೃಶ್ಯಗಳು ಈ ಸಿನಿಮಾದಲ್ಲಿ ಇವೆಯಂತೆ. 1961ರಲ್ಲಿ ತೆರೆಕಂಡಿದ್ದ ‘ಸ್ಟ್ರೀ’ ಸಿನಿಮಾದ ಹೆಸರನ್ನೇ ಈ ಚಿತ್ರಕ್ಕೂ ಇಡಲಾಗಿದೆ. ಇದೇ ಹೆಸರಿನ ಧಾರಾವಾಹಿಯೊಂದು ಬೆಂಗಾಲಿಯಲ್ಲಿ ಪ್ರಸಾರವಾಗಿತ್ತು. ಈ ಚಿತ್ರದ ನಿರ್ಮಾಪಕ ದಿನೇಶ್‌ ವಿಜಾನ್‌. ನಿರ್ದೇಶನ ಜವಾಬ್ದಾರಿ ಅಮರ್‌ ಕೌಶಿಕ್‌ ಅವರದ್ದು. ಸಿನಿಮಾಕ್ಕೆ ರಾಜ್‌ ನಿಡಿಮೊರು, ಕೃಷ್ಣ ಡಿ.ಕೆ ಕಥೆ ಹೆಣೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry