ನಾನು ಎಲ್ಲಿಗೇ ಹೋದರೂ ಈ ಸ್ವಚ್ಛತೆ, ಶುದ್ಧಿಕರಣವನ್ನು ನೀವು ಮುಂದುವರಿಸುತ್ತೀರಾ?: ನಟ ಪ್ರಕಾಶ್‌ ರೈ

7

ನಾನು ಎಲ್ಲಿಗೇ ಹೋದರೂ ಈ ಸ್ವಚ್ಛತೆ, ಶುದ್ಧಿಕರಣವನ್ನು ನೀವು ಮುಂದುವರಿಸುತ್ತೀರಾ?: ನಟ ಪ್ರಕಾಶ್‌ ರೈ

Published:
Updated:
ನಾನು ಎಲ್ಲಿಗೇ ಹೋದರೂ ಈ ಸ್ವಚ್ಛತೆ, ಶುದ್ಧಿಕರಣವನ್ನು ನೀವು ಮುಂದುವರಿಸುತ್ತೀರಾ?: ನಟ ಪ್ರಕಾಶ್‌ ರೈ

ಬೆಂಗಳೂರು: ‘ನಾನು ಎಲ್ಲಿಗೇ ಹೋಗುತ್ತಿದ್ದರೂ ಈ ಶುದ್ಧೀಕರಣ ಮತ್ತು ಸ್ವಚ್ಛತೆ ಸೇವೆಯನ್ನು ನೀವು ಮುಂದುವರಿಸುತ್ತೀರಾ?’ ಎಂದು ನಟ ಪ್ರಕಾಶ್‌ ರೈ ಪ್ರಶ್ನಿಸಿದ್ದಾರೆ.

‘ಪ್ರೀತಿ ಪದಗಳ ಪಯಣ’ ಆಯೋಜನಾ ಸಮಿತಿ ಶಿರಸಿಯಲ್ಲಿನ ರಾಘವೇಂದ್ರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಹೆಸರಿನ ಕಾರ್ಯಕ್ರಮ ಉದ್ಘಾಟಿಸಿ ಪ್ರಕಾಶ್‌ ರೈ ಮಾತನಾಡಿದ್ದ ವೇದಿಕೆ ಹಾಗೂ ಮಠದ ಆವರಣವನ್ನು ಅಲ್ಲಿನ ಬಿಜೆಪಿ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದರು.

ಬಿಜೆಪಿಯವರ ಶುದ್ಧಿ ಕಾರ್ಯ ಕುರಿತು #justasking ಎಂದು ಮಂಗಳವಾರ ಟ್ವೀಟ್‌ ಮಾಡಿರುವ ಪ್ರಕಾಶ್‌ ರೈ, ‘ನಾನು ಶಿರಸಿ ಪಟ್ಟಣದಲ್ಲಿ ಮಾತನಾಡಿದೆ... ಬಿಜೆಪಿ ಕಾರ್ಯಕರ್ತರು ವೇದಿಕೆಯನ್ನು ಸ್ವಚ್ಛಗೊಳಿಸಿ, ಶುದ್ಧೀಕರಿಸುತ್ತಿದ್ದಾರೆ... ಹಸುವಿನ ಮೂತ್ರವನ್ನು(ದೈವಿಕ ಗೊಮೂತ್ರ) ಚಿಮುಕಿಸುವ ಮೂಲಕ......, ನಾನು ಎಲ್ಲಿಗೇ ಹೋಗುತ್ತಿದ್ದರೂ ಈ ಶುದ್ಧೀಕರಣ ಮತ್ತು ಸ್ವಚ್ಛತೆ ಸೇವೆಯನ್ನು ನೀವು ಮುಂದುವರಿಸುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.

ಜತೆಗೆ, ‘ಪ್ರಜಾವಾಣಿ’ಯಲ್ಲಿ ಇಂದು(ಮಂಗಳವಾರ) ಪ್ರಕಟವಾಗಿರುವ ಪ್ರಕಾಶ್‌ ರೈ ಮಾತನಾಡಿದ ಸ್ಥಳ ಸ್ವಚ್ಛತೆ! ಸುದ್ದಿಯ ಚಿತ್ರವನ್ನೂ ಟ್ವೀಟ್‌ನಲ್ಲಿ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry