ಬೇರೆ ಬಣ್ಣ ಬಳಿದಿದ್ದಕ್ಕೆ ಸ್ಪಷ್ಟನೆ ಕೇಳಿದ ಉತ್ತರ ಪ್ರದೇಶ ಸರ್ಕಾರ

7

ಬೇರೆ ಬಣ್ಣ ಬಳಿದಿದ್ದಕ್ಕೆ ಸ್ಪಷ್ಟನೆ ಕೇಳಿದ ಉತ್ತರ ಪ್ರದೇಶ ಸರ್ಕಾರ

Published:
Updated:
ಬೇರೆ ಬಣ್ಣ ಬಳಿದಿದ್ದಕ್ಕೆ ಸ್ಪಷ್ಟನೆ ಕೇಳಿದ ಉತ್ತರ ಪ್ರದೇಶ ಸರ್ಕಾರ

ಲಖನೌ: ಕೇಸರಿ ಬಣ್ಣ ಬಳಿಯಲಾಗಿದ್ದ ರಾಜ್ಯ ಹಜ್ ಸಮಿತಿ ಕಚೇರಿಯ ಕಾಂಪೌಂಡ್ ಗೋಡೆಗೆ ಬೇರೆ ಬಣ್ಣ ಬಳಿಸಿದ್ದಕ್ಕೆ ಸ್ಪಷ್ಟನೆ ಕೇಳಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

ಹಜ್ ಸಮಿತಿಯ ಕಾರ್ಯದರ್ಶಿಯಿಂದ ಸ್ಪಷ್ಟನೆ ಪಡೆಯುವಂತೆ ಮುಸ್ಲಿಮ್ ವಕ್ಫ್ ಹಾಗೂ ಹಜ್ ಸಚಿವ ಮೊಹ್ಸಿನ್ ರಾಜಾ ಅವರು ಸಚಿವಾಲಯದ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

‘ರಾಜ್ಯ ಹಜ್ ಸಮಿತಿ ಸೂಚನೆಯಂತೆ ಕಾಂಪೌಂಡ್ ಗೋಡೆಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಅದರೆ ಮರುದಿನವೇ ಬೇರೆ ಬಣ್ಣ ಬಳಿದಿದ್ದು ಯಾವ ಕಾರಣಕ್ಕೆ ಎಂದು ತಿಳಿಯಲಿಲ್ಲ. ಮಾಧ್ಯಮದಿಂದಲೂ ಹಲವು ಪ್ರಶ್ನೆಗಳು ಬಂದಿವೆ’ ಎಂದು ರಾಜಾ ಹೇಳಿದ್ದಾರೆ.

ಇವುಗಳನ್ನೂ ಓದಿ...

ಕೇಸರಿ ಬಣ್ಣಕ್ಕೆ ತಿರುಗಿದ ಹಜ್‌ ಭವನ

ಉತ್ತರ ಪ್ರದೇಶದ ಹಜ್ ಭವನದ ಕೇಸರಿ ಬಣ್ಣ ತೆಗೆದು ಕ್ರೀಮ್ ಬಣ್ಣ ಬಳಿದರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry