ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತಿ ದೊಡ್ಡ, ಎತ್ತರದ ಗಾಳಿ ಶುದ್ಧೀಕರಣ ಟವರ್ ನಿರ್ಮಿಸಿದ ಚೀನಾ

Last Updated 16 ಜನವರಿ 2018, 14:37 IST
ಅಕ್ಷರ ಗಾತ್ರ

ಬೀಜಿಂಗ್: ಕಳೆದ ಕೆಲವು ವರ್ಷಗಳಿಂದ ಭಾರಿ ಪ್ರಮಾಣದ ಹೊಂಜಿನ (ಸ್ಮಾಗ್‌) ಸಮಸ್ಯೆ ಎದುರಿಸುತ್ತಿರುವ ಚೀನಾ ಇಲ್ಲಿನ ಕ್ಸಿಯಾನ್‌ನಲ್ಲಿ ವಿಶ್ವದಲ್ಲೇ ಅತಿ ಎತ್ತರದ ಹಾಗೂ ದೊಡ್ಡ ಪ್ರಾಯೋಗಿಕ ಗಾಳಿ ಶುದ್ಧೀಕರಣ ಟವರ್ ನಿರ್ಮಿಸಿದೆ.

ಈ ಟವರ್ 330 ಅಡಿ ಎತ್ತರವಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಟವರ್‌ನಿಂದಾಗಿ ಕ್ಸಿಯಾನ್‌ ಪ್ರದೇಶದಲ್ಲಿ ಗಾಳಿಯ ಗುಣಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮವಾಗಿದೆ ಎನ್ನಲಾಗಿದೆ. ಸದ್ಯ, ಚೀನಾದ ವಿಜ್ಞಾನ ಅಕಾಡೆಮಿಯ ಭೂ ವಾತಾವರಣ ವಿಭಾಗದ ಸಂಶೋಧಕರು ಟವರ್‌ನ ಪರೀಕ್ಷಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಟವರ್‌ ಅಳವಡಿಸಿದ ನಂತರ ಆ ಪ್ರದೇಶದ 10 ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿರುವುದು ಕಂಡುಬಂದಿದೆ ಎಂದು ಸಂಶೋಧಕರ ತಂಡದ ನೇತೃತ್ವ ವಹಿಸಿರುವ ಕಾವೊ ಜುಂಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT