ಶ್ರೀಲಂಕಾ: ಮಹಿಳೆಯರಿಗೆ ಮದ್ಯ ಮಾರಾಟ ನಿಷೇಧ

7

ಶ್ರೀಲಂಕಾ: ಮಹಿಳೆಯರಿಗೆ ಮದ್ಯ ಮಾರಾಟ ನಿಷೇಧ

Published:
Updated:
ಶ್ರೀಲಂಕಾ: ಮಹಿಳೆಯರಿಗೆ ಮದ್ಯ ಮಾರಾಟ ನಿಷೇಧ

ಕೊಲಂಬೊ: ಮಹಿಳೆಯರು ಮದ್ಯ ಖರೀದಿಸದಂತೆ ಶ್ರೀಲಂಕಾದಲ್ಲಿ ಮತ್ತೆ ನಿಷೇಧ ಹೇರಲಾಗಿದೆ.

ಈ ಬಗ್ಗೆ ಮಂಗಳವಾರ ನಡೆದ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮದ್ಯ ಮಾರಾಟ ಅಥವಾ ತಯಾರಿಸುವ ಸ್ಥಳದಲ್ಲೂ ಮಹಿಳೆಯರು ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ.

ಮಹಿಳೆಯರಿಗೆ ಮದ್ಯ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಿ 1979ರಲ್ಲಿ ಕಾನೂನು ಜಾರಿಗೊಳಿಸಲಾಗಿದೆ. ಜನವರಿ 12ರಂದು ಈ ಕಾನೂನು ರದ್ದುಪಡಿಸುವುದಾಗಿ ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದರು. ಆದರೆ, ಈ ನಿರ್ಧಾರಕ್ಕೆ ಬೌದ್ಧ ಸನ್ಯಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬೌದ್ಧ ಸಂಸ್ಕೃತಿ ಮೇಲೆ ನಡೆಸುತ್ತಿರುವ ದಾಳಿ ಇದಾಗಿದೆ ಎಂದು ಟೀಕಿಸಿದ್ದರು. ಹೀಗಾಗಿ, ಒತ್ತಡಕ್ಕೆ ಮಣಿದ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry