ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜ್ವಾಲಾಮುಖಿ!

7
ಮನೆಗಳನ್ನು ತೊರೆಯುತ್ತಿರುವ 30ಸಾವಿರ ಸ್ಥಳೀಯ ನಿವಾಸಿಗಳು

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜ್ವಾಲಾಮುಖಿ!

Published:
Updated:
ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜ್ವಾಲಾಮುಖಿ!

ಲೆಗಾಝ್ಪಿ (ಎಎಫ್‌ಪಿ): ಫಿಲಿಪ್ಪಿನ್ಸ್‌ನ ಅಲ್ಬೆ ಪ್ರಾಂತ್ಯದಲ್ಲಿ ಉಕ್ಕುತ್ತಿರುವ ಜ್ವಾಲಾಮುಖಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಈ ಜ್ವಾಲಾಮುಖಿ ಯಾವುದೇ ಸಂದರ್ಭದಲ್ಲಿ ಸ್ಫೋಟಗೊಳ್ಳಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಪಟಾಕಿಯಂತೆ ಆಗಸದಲ್ಲಿ ಚಿತ್ತಾರ ಮೂಡಿಸುತ್ತಿರುವುದರಿಂದ ಗಮನಸೆಳೆಯುತ್ತಿದೆ.  ಜ್ವಾಲಾಮುಖಿ ಉಕ್ಕುವ ದೃಶ್ಯವನ್ನು ನೋಡಲು ಮತ್ತು ಸೆರೆಹಿಡಿಯಲು ಪ್ರವಾಸಿಗರು ತಂಡೋಪತಂಡವಾಗಿ ಇಲ್ಲಿಗೆ ಬರುತ್ತಿದ್ದಾರೆ ಎಂದು ಅಲ್ಬೆ ಪ್ರಾಂತ್ಯದ ವಕ್ತಾರ ವಕ್ತಾರ ಡ್ಯಾನಿ ಗಾರ್ಸಿಯಾ ಹೇಳಿದ್ದಾರೆ.  

‘ಇದೊಂದು ಅದ್ಭುತ ದೃಶ್ಯ. ರಾತ್ರಿ ವೇಳೆ ಇದನ್ನು ನೋಡಲು ಬಹಳ ಸೊಗಸಾಗಿರುತ್ತದೆ. ಇದು ನೈಸರ್ಗಿಕ ಕ್ರಿಯೆ. ಆದರೆ, ಸ್ಫೋಟದ ಭೀತಿಯೂ ಇದೆ’ ಎಂದು ಅವರ ಅಭಿಪ್ರಾಯಪಟ್ಟರು.

ಜ್ವಾಲಾಮುಖಿಯಿಂದ ತಪ್ಪಿಸಿಕೊಳ್ಳಲು ಸುಮಾರು 30 ಸಾವಿರ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry