ನಕ್ಷತ್ರಪುಂಜದ 3ಡಿ ಚಲನಚಿತ್ರ ನಿರ್ಮಾಣ

7

ನಕ್ಷತ್ರಪುಂಜದ 3ಡಿ ಚಲನಚಿತ್ರ ನಿರ್ಮಾಣ

Published:
Updated:
ನಕ್ಷತ್ರಪುಂಜದ 3ಡಿ ಚಲನಚಿತ್ರ ನಿರ್ಮಾಣ

ವಾಷಿಂಗ್ಟನ್: ನಾಸಾದ ದೂರದರ್ಶಕಗಳು ಸೆರೆಹಿಡಿದಿರುವ ಚಿತ್ರಗಳ ದತ್ತಾಂಶಗಳನ್ನು ಬಳಸಿಕೊಂಡು ವಿಜ್ಞಾನಿಗಳು ನಕ್ಷತ್ರಪುಂಜದ 3ಡಿ ಚಲನಚಿತ್ರ ನಿರ್ಮಿಸಿದ್ದಾರೆ.

ಮೂರು ನಿಮಿಷದ ಈ ಚಲನಚಿತ್ರದಲ್ಲಿ ನಕ್ಷತ್ರಪುಂಜವನ್ನು ಸಾಧಾರಣವಾಗಿ ಹಾಗೂ ಇನ್ಫ್ರಾರೆಡ್ ಬೆಳಕಿನಲ್ಲಿ ತೋರಿಸಲಾಗಿದೆ. ಬ್ರಹ್ಮಾಂಡದ ಕುರಿತು ಇರುವ ಮೂಲಭೂತ ಪ್ರಶ್ನೆಗಳನ್ನು ಅನ್ವೇಷಿಸಲು ನೋಡುಗರಿಗೆ ಇದು ಸಹಾಯ ಮಾಡುತ್ತದೆ.

ಈ ಚಿತ್ರ ವೀಕ್ಷಿಸುವಾಗ ನಕ್ಷತ್ರ ಪುಂಜದಲ್ಲಿ ’3ಡಿ’ ಪ್ರವಾಸ ಮಾಡಿದಂತೆ ಅನಿಸುತ್ತದೆ. ಹೊಸ ನಕ್ಷತ್ರಗಳು, ಮೋಡಗಳು ಹಾಗೂ ವಿಕಿರಣಗಳ ನಡುವೆ ಹಾದುಹೋಗಿ ಸಾಕಷ್ಟು ಹತ್ತಿರದಿಂದ ನೋಡಿದಂತಾಗುತ್ತದೆ.

‘ಈ ರೀತಿ ನಕ್ಷತ್ರಪುಂಜವನ್ನು ಸಮೀಪದಿಂದ ನೋಡುವುದರ ಮೂಲಕ ಜನರಿಗೆ ಬ್ರಹ್ಮಾಂಡ ವಾಸ್ತವವಾಗಿಯೂ ಯಾವ ರೀತಿ ಇದೆ ಎನ್ನುವ ಅರಿವಾಗುತ್ತದೆ’ ಎಂದು ಅಮೆರಿಕದ ದೂರದರ್ಶಕ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಫ್ರಾಂಕ್ ಸಮ್ಮರ್ಸ್ ಹೇಳಿದ್ದಾರೆ.

ಕೇವಲ 20 ಲಕ್ಷ ವರ್ಷ ಹಳೆಯದಾದ ನಕ್ಷತ್ರಪುಂಜ ವೀಕ್ಷಿಸುವುದು, ಹೊಸ ನಕ್ಷತ್ರಗಳನ್ನು ಹಾಗೂ ರಚನೆಯಾಗುತ್ತಿರುವ ನಕ್ಷತ್ರಗಳನ್ನು ಅಧ್ಯಯನ ಮಾಡಲು ಇರುವ ಪ್ರಯೋಗಾಲಯದ ರೀತಿ ಅನಿಸುತ್ತದೆ. 460 ಕೋಟಿ ವರ್ಷಗಳ ಹಿಂದೆ ಸೂರ್ಯ ರೂಪುಗೊಂಡಾಗ ಏನಾಗಿರಬಹುದು ಎನ್ನುವ ಬಗ್ಗೆ ಕಿರುಚಿತ್ರಣ ದೊರಕುತ್ತದೆ.

ಹಬಲ್ ಮತ್ತು ಸ್ಪಿಟ್ಜರ್ ದೂರದರ್ಶಕಗಳು ಸೆರೆಹಿಡಿದಿರುವ ಚಿತ್ರಗಳ ದತ್ತಾಂಶಗಳನ್ನು ಬಳಸಿಕೊಂಡು ಫ್ರಾಂಕ್ ನೇತೃತ್ವದ ತಂಡ ಈ ಚಿತ್ರ ನಿರ್ಮಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry