ಬಾಷ್ ಎಸ್‍ಜಿ ಹೆಸರು ಬದಲು

7

ಬಾಷ್ ಎಸ್‍ಜಿ ಹೆಸರು ಬದಲು

Published:
Updated:

ಬೆಂಗಳೂರು: ಆಟೊಮೊಬೈಲ್ ಬಿಡಿಭಾಗಗಳನ್ನು ತಯಾರಿಸುವ  ಬಾಷ್ ಸಮೂಹದ ಸ್ಟಾರ್ಟರ್ ಮೋಟಾರು ಮತ್ತು ಜನರೇಟರ್ (ಎಸ್‍ಜಿ) ವಿಭಾಗ ಇನ್ನು ಮುಂದೆ ಸ್ವತಂತ್ರ ಕಂಪನಿಯಾಗಿ ಕಾರ್ಯ ನಿರ್ವಹಿಸಲಿದೆ.

ತಕ್ಷಣವೇ ಜಾರಿಗೆ ತರುವಂತೆ ಎಸ್‍ಇಜಿ ಆಟೊಮೋಟಿವ್ ಕಂಪನಿ ಅಸ್ತಿತ್ವಕ್ಕೆ ಬಂದಿದೆ. ಸ್ಟಾರ್ಟರ್ ಮೋಟರುಗಳು ಮತ್ತು ಜನರೇಟರುಗಳ ತಯಾರಿಕೆ ಮತ್ತು ಅಭಿವೃದ್ಧಿಯಲ್ಲಿ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಈ ವಿಭಾಗವು ಕಳೆದ ವರ್ಷವಷ್ಟೇ ‘ಬಾಷ್ ಲೈಟ್’ ಉತ್ಪನ್ನಗಳನ್ನು ಪರಿಚಯಿಸಿತ್ತು.

ಹೊಸ ಕಂಪನಿಯು ಜೆಂಗ್‍ಜೋ ಕೋಲ್ ಮೈನಿಂಗ್ ಮಷಿನರಿ ಗ್ರೂಪ್ ಕಂ, ಲಿ. ಹಾಗೂ ಇದರ ಹೂಡಿಕೆದಾರ ಕಂಪನಿಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ.

‘ಕಂಪನಿ ಹೊಸ ಹೆಸರು ಪಡೆದುಕೊಂಡರೂ ಬದ್ಧತೆ ಹಾಗೆಯೇ ಮುಂದುವರೆಯಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ಎಂ ಆರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry