1.20 ಲಕ್ಷಕ್ಕೂ ಹೆಚ್ಚು ಕಂಪನಿ ನೋಂದಣಿ ರದ್ದು ನಿರ್ಧಾರ

7

1.20 ಲಕ್ಷಕ್ಕೂ ಹೆಚ್ಚು ಕಂಪನಿ ನೋಂದಣಿ ರದ್ದು ನಿರ್ಧಾರ

Published:
Updated:
1.20 ಲಕ್ಷಕ್ಕೂ ಹೆಚ್ಚು ಕಂಪನಿ ನೋಂದಣಿ ರದ್ದು ನಿರ್ಧಾರ

ನವದೆಹಲಿ: ಹಲವಾರು ನಿಯಮಗಳನ್ನು ಪಾಲಿಸದ ಕಾರಣಕ್ಕೆ 1.20 ಲಕ್ಷಕ್ಕೂ ಹೆಚ್ಚು ಕಂಪನಿಗಳನ್ನು ಹೊಸದಾಗಿ ಅಧಿಕೃತ ದಾಖಲೆಗಳಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಪ್ಪು ಹಣ ವಿರುದ್ಧದ ಹೋರಾಟದ ಅಂಗವಾಗಿ, ಕಂ‍ಪನಿ ಕಾಯ್ದೆಯ ನಿಯಮಗಳನ್ನು ಪಾಲನೆ ಮಾಡದ ಈ ಸಂಸ್ಥೆಗಳ ನೋಂದಣಿ ರದ್ದುಪಡಿಸಲು ಕ್ರಮಕೈಗೊಳ್ಳಲಾಗಿದೆ.

ಕಳೆದ ವಾರ ನಡೆದ ಪರಿಶೀಲನಾ ಸಭೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಕಂಪನಿ ವ್ಯವಹಾರ ಸಚಿವ ಪಿ. ಪಿ. ಚೌಧರಿ ಅವರು ಸಭೆಯ ಅಧ್ಯಕ್ಷತೆವಹಿಸಿದ್ದರು. ಕಾರ್ಯನಿರ್ವಹಣೆ ಕುರಿತ ದಾಖಲೆಗಳನ್ನು ಸಲ್ಲಿಸದ ಕಂಪನಿಗಳ ವಿರುದ್ಧದ ಕ್ರಮಗಳನ್ನು ತ್ವರಿತಗೊಳಿಸಲು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ನಿಯಮ ಪಾಲಿಸದೇ ಇರುವ 2.26 ಲಕ್ಷ ಕಂಪನಿಗಳ ನೋಂದಣಿಯನ್ನು ಈಗಾಗಲೇ ರದ್ದುಪಡಿಸಲಾಗಿದೆ. ಈ ಕಂಪನಿಗಳ ಜತೆ ಸಂಬಂಧ ಹೊಂದಿದ್ದ 3.09 ಲಕ್ಷ ನಿರ್ದೇಶಕರನ್ನೂ ಅನರ್ಹಗೊಳಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ಕಂಪನಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.

‘ಎರಡು ವರ್ಷಗಳವರೆಗೆ ಹಣಕಾಸು ಮಾಹಿತಿ ಸಲ್ಲಿಸದ ಅಥವಾ ವಾರ್ಷಿಕ ಲೆಕ್ಕಪತ್ರ ವಿವರ ಸಲ್ಲಿಸದೇ ಇರುವ, ಯಾವುದೇ ಕಾರ್ಯಾಚರಣೆ ನಡೆಸದೇ ಇರುವ 2.97 ಲಕ್ಷ ಕಂಪನಿಗಳನ್ನು ರಿಜಿಸ್ಟ್ರಾರ್‌ ಆಫ್‌ ಕಂಪನಿ ಗುರುತಿಸಿತ್ತು. ಇದರಲ್ಲಿ 2.26 ಲಕ್ಷ ಕಂಪನಿಗಳ ನೋಂದಣಿಯನ್ನು ಡಿಸೆಂಬರ್‌ 12ರಂದೇ ರದ್ದುಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry