ಟ್ಯಾಬ್ಲೆಟ್‌ ಮೇಲಿನ ಜಿಎಸ್‌ಟಿ ತಗ್ಗಿಸಿ

7

ಟ್ಯಾಬ್ಲೆಟ್‌ ಮೇಲಿನ ಜಿಎಸ್‌ಟಿ ತಗ್ಗಿಸಿ

Published:
Updated:
ಟ್ಯಾಬ್ಲೆಟ್‌ ಮೇಲಿನ ಜಿಎಸ್‌ಟಿ ತಗ್ಗಿಸಿ

ನವದೆಹಲಿ: ಜಿಎಸ್‌ಟಿಯಲ್ಲಿ ಟ್ಯಾಬ್ಲೆಟ್‌, ಪರ್ಸನಲ್‌ ಕಂಪ್ಯೂಟರ್ (ಪಿ.ಸಿ) ಮೇಲಿನ ತೆರಿಗೆಯನ್ನು ಶೇ 5ಕ್ಕೆ ತಗ್ಗಿಸುವಂತೆ ಟ್ಯಾಬ್ಲೆಟ್‌ ತಯಾರಿಕಾ ಕಂಪನಿ ಡೇಟಾವಿಂಡ್‌ ಮನವಿ ಮಾಡಿದೆ.

‘ಜಿಎಸ್‌ಟಿ ಜಾರಿಗೂ ಮುನ್ನ ಟ್ಯಾಬ್ಲೆಟ್‌ಗಳಿಗೆ ಶೇ 5 ರಷ್ಟು ತೆರಿಗೆ ಇತ್ತು. ಭಾರತದಲ್ಲಿಯೇ ತಯಾರಿಸಿ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕೆಲವು ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಹೀಗಾಗಿ ಟ್ಯಾಬ್ಲೆಟ್‌ಗೆ ಇದ್ದ ಶೇ 5 ರಷ್ಟು ತೆರಿಗೆಯನ್ನೂ ಕೈಬಿಡಲಾಗಿತ್ತು’ ಎಂದು ಕಂಪನಿಯ ಸಿಇಒ ಮತ್ತು ಅಧ್ಯಕ್ಷ ಸುನೀತ್‌ ಸಿಂಗ್‌ ತಿಳಿಸಿದ್ದಾರೆ.

‘ಜಿಎಸ್‌ಟಿ ಜಾರಿಗೆ ಬಂದ ನಂತರ ಶೂನ್ಯ ತೆರಿಗೆಯನ್ನು ಶೇ 18ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಕಡಿಮೆ ಆದಾಯ ಹೊಂದಿರುವವರಿಗೆ ಟ್ಯಾಬ್ಲೆಟ್‌ ಖರೀದಿಸಲು ಸಾಧ್ಯವಾಗುತ್ತಿಲ್ಲ.

‘7 ಇಂಚ್‌ ಟ್ಯಾಬ್ಲೆಟ್‌ಗೆ ಶೇ 18 ರಷ್ಟು ತೆರಿಗೆ ಇದೆ. 6 ಇಂಚ್ ಸ್ಮಾರ್ಟ್‌ಫೋನ್‌ಗೆ ಶೇ 12 ರಷ್ಟು ತೆರಿಗೆ ಇದೆ. ಆದರೆ ಎರಡರ ಕಾರ್ಯವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರಿಂದಾಗಿ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಕೆ ಆಗುತ್ತಿರುವ ಟ್ಯಾಬ್ಲೆಟ್‌ ದುಬಾರಿಯಾಗಿದೆ’ ಎಂದು ಹೇಳಿದ್ದಾರೆ.

ಬಿಸ್ಕಿಟ್‌ ತೆರಿಗೆ ಇಳಿಸಲು ಒತ್ತಾಯ

ಬಿಸ್ಕಿಟ್‌ ಮತ್ತು ಅದರ ಉತ್ಪನ್ನಗಳ ಮೇಲಿನ ತೆರಿಗೆ ದರ ತಗ್ಗಿಸುವಂತೆ ಬಿಸ್ಕಿಟ್‌ ತಯಾರಕರು ಕೇಂದ್ರ  ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜಿಎಸ್‌ಟಿಯಲ್ಲಿ ಬಿಸ್ಕಿಟ್  ಶೇ 18ರ ತೆರಿಗೆ ದರದ ವ್ಯಾಪ್ತಿಯಲ್ಲಿದೆ.

ಬಿಸ್ಕಿಟ್‌ ಖರೀದಿಸುವವರಲ್ಲಿ ಬಡವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗರಿಷ್ಠ ತೆರಿಗೆಯಿಂದ ಖರೀದಿ ಪ್ರಮಾಣ ಇಳಿಕೆ ಕಾಣುತ್ತಿದೆ. ಜಿಎಸ್‌ಟಿ ಜಾರಿಯಿಂದಾಗಿ ಮಾರಾಟ ಶೇ 15 ರಷ್ಟು ಇಳಿಕೆ ಕಂಡಿದೆ. ಇದು ಐಷಾರಾಮಿ ಉತ್ಪನ್ನ ಅಲ್ಲ. ಗರಿಷ್ಠ ತೆರಿಗೆಯಿಂದ ಉದ್ಯಮದ ಪ್ರಗತಿಗೂ ಅಡ್ಡಿಯಾಗುತ್ತದೆ ಎಂದು ಬಿಸ್ಕಿಟ್‌ ತಯಾರಕರ ಒಕ್ಕೂಟ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry