ಜಿಗ್ನೇಶ್‌ ಮೆವಾನಿ ಸುದ್ದಿಗೋಷ್ಠಿಗೆ ಬಹಿಷ್ಕಾರ

7

ಜಿಗ್ನೇಶ್‌ ಮೆವಾನಿ ಸುದ್ದಿಗೋಷ್ಠಿಗೆ ಬಹಿಷ್ಕಾರ

Published:
Updated:
ಜಿಗ್ನೇಶ್‌ ಮೆವಾನಿ ಸುದ್ದಿಗೋಷ್ಠಿಗೆ ಬಹಿಷ್ಕಾರ

ಚೆನ್ನೈ : ಗುಜರಾತ್‌ ಶಾಸಕ ಹಾಗೂ ದಲಿತ ಮುಖಂಡ ಜಿಗ್ನೇಶ್‌ ಮೆವಾನಿ ಅವರು ಇಂಗ್ಲಿಷ್‌ ಸುದ್ದಿವಾಹಿನಿಯೊಂದರ ಸಮ್ಮುಖದಲ್ಲಿ ಮಾತನಾಡಲು ನಿರಾಕರಿಸಿದ್ದನ್ನು ಖಂಡಿಸಿ, ಇತರ ಎಲ್ಲ ವರದಿಗಾರರೂ ಮಂಗಳವಾರ ಇಲ್ಲಿ ಅವರ ಸುದ್ದಿಗೋಷ್ಠಿಯನ್ನೇ ಬಹಿಷ್ಕರಿಸಿದರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಜತೆ ಸಂವಾದ ನಡೆಸಿದ ನಂತರ ಜಿಗ್ನೇಶ್‌, ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಒಪ್ಪಿದ್ದರು. ಅದರಂತೆ, ಸುದ್ದಿ

ವಾಹಿನಿಗಳ ವರದಿಗಾರರೆಲ್ಲರೂ ತಮ್ಮ ಮೈಕ್ರೊಫೋನ್‌ಗಳನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಾಗ, ‘ನಿಮ್ಮ ಸಾಧನ ಹೊರಗೆ ತೆಗೆದಿಡಿ’ ಎಂದು ಸಂಬಂಧಪಟ್ಟ ಸುದ್ದಿಗಾರನಿಗೆ ಮೆವಾನಿ ಹೇಳಿದರು.

‘ಈ ಚಾನೆಲ್‌ನಿಂದ ಪ್ರಶ್ನೆಗಳು ಬಂದರೆ ನಾನು ಯಾರೊಂದಿಗೂ ಮಾತನಾಡುವುದಿಲ್ಲ. ಹೀಗಾಗಿ ಅವರು ಮೊದಲು ಮೈಕ್‌ ತೆಗೆದಿಡಲಿ’ ಎಂದು ಮೆವಾನಿ ಅವರು ಹೇಳುವ ದೃಶ್ಯವನ್ನು ಬಳಿಕ ಚಾನೆಲ್‌ ಪ್ರಸಾರ ಮಾಡಿದೆ. ಚೆನ್ನೈ ಮಾಧ್ಯಮ ಮಂದಿಯ ನಿರ್ಧಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry