ಪಬ್‌ನಲ್ಲಿ ಬೆಂಕಿ ಪ್ರಕರಣ: ಮಾಲೀಕ ಶರಣು

7

ಪಬ್‌ನಲ್ಲಿ ಬೆಂಕಿ ಪ್ರಕರಣ: ಮಾಲೀಕ ಶರಣು

Published:
Updated:

ಮುಂಬೈ: ನಗರದ ಕಮಲಾ ಮಿಲ್ಸ್‌ ಕಾಂಪೌಂಡ್‌ನಲ್ಲಿರುವ ಕಟ್ಟಡದಲ್ಲಿನ ಬೆಂಕಿ ಆಕಸ್ಮಿಕಕ್ಕೆ ಸಂಬಂಧಿಸಿ ಎರಡು ವಾರಗಳಿಂದ ತಲೆಮರೆಸಿಕೊಂಡಿದ್ದ ಮೋಜೋಸ್ ಬಿಸ್ಟ್ರೋ ಪಬ್‌ನ ಮಾಲೀಕ ಯುಗ್ ಟುಲಿ ಪೊಲೀಸರಿಗೆ ಮಂಗಳವಾರ ಶರಣಾಗಿದ್ದಾರೆ.

‘ಎನ್.ಎಂ.ಜೋಶಿ ಮಾರ್ಗ್ ಪೊಲೀಸ್ ಠಾಣೆಗೆ ಬಂದು ಶರಣಾದ ಯುಗ್ ಅವರನ್ನು ಬಂಧಿಸಿದ್ದೇವೆ’ ಎಂದು ಕೇಂದ್ರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಸ್.ಜಯಕುಮಾರ್ ತಿಳಿಸಿದ್ದಾರೆ. ಇದರೊಂದಿಗೆ, ಬೆಂಕಿ ತಗುಲಿದ ಮೋಜೋಸ್ ಬಿಸ್ಟ್ರೋ ಹಾಗೂ ಪಕ್ಕದ ಒನ್ ಅಬವ್ ಪಬ್‌ಗಳ ಎಲ್ಲ ಮಾಲೀಕರನ್ನೂ ಬಂಧಿಸಿದಂತಾಗಿದೆ.

ಕಳೆದ ಡಿಸೆಂಬರ್‌ 29ರ ರಾತ್ರಿ ಒನ್‌ ಅಬವ್‌ ಪಬ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದ ವೇಳೆ ಅಗ್ನಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ 14 ಮಂದಿ ಮೃತಪಟ್ಟು, 55ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry