ಜಲ್ಲಿಕಟ್ಟು: ತಮಿಳುನಾಡಿನಲ್ಲಿ ಮೂವರ ಸಾವು

7

ಜಲ್ಲಿಕಟ್ಟು: ತಮಿಳುನಾಡಿನಲ್ಲಿ ಮೂವರ ಸಾವು

Published:
Updated:

ಮದುರೆ: ಸಂಕ್ರಾಂತಿ ಪ್ರಯುಕ್ತ ತಮಿಳುನಾಡಿನಲ್ಲಿ ಮಂಗಳವಾರ ನಡೆದ ಸಾಂಪ್ರದಾಯಿಕ ಜಲ್ಲಿಕಟ್ಟು ಹಾಗೂ ಮಂಜವಿರಟ್ಟು ಕ್ರೀಡೆಗಳ ಸಂದರ್ಭದಲ್ಲಿ ಮೂವರು ಮೃತಪಟ್ಟಿದ್ದಾರೆ. ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ.

ಶಿವಗಂಗಾ ಜಿಲ್ಲೆಯ ಸಿರವಯಾಲ್‌ ಎಂಬಲ್ಲಿ ನಡೆದ ಮಂಜವಿರಟ್ಟು (ಜಲ್ಲಿಕಟ್ಟುಗಿಂತ ಕೊಂಚ ಭಿನ್ನವಾದ ಹೋರಿ ಬೆದರಿಸುವ ಸ್ಪರ್ಧೆ) ನೋಡಲು ಬಂದಿದ್ದ ಜನರ ಗುಂಪಿನ ಕಡೆಗೆ ಗೂಳಿ ನುಗ್ಗಿದಾಗ ಇಬ್ಬರು ಮೃತಪಟ್ಟರು. ತಿರುಚಿನಾಪಳ್ಳಿ ಜಿಲ್ಲೆಯ ಆವರಂಗಾಡು ಎಂಬಲ್ಲಿ ಜಲ್ಲಿಕಟ್ಟು ನೋಡಲು ಬಂದಿದ್ದ ಸೋಲೈ ಪಾಂಡ್ಯನ್‌ ಎಂಬುವವರು ಹೋರಿ ತಿವಿದು ಸಾವನ್ನಪ್ಪಿದ್ದಾರೆ.

ಇದರೊಂದಿಗೆ, ಪ್ರಸಕ್ತ ಋತುವಿನಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಬಂದು ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಪಲಮೇಡು ಎಂಬಲ್ಲಿ ಸೋಮವಾರ ಒಬ್ಬರನ್ನು ಹೋರಿ ತಿವಿದು ಸಾಯಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry