ಐದು ಕೋಟಿ ಮೌಲ್ಯದ ಕಾರಿನೊಂದಿಗೆ ಚಾಮುಂಡೇಶ್ವರಿಗೆ ದರ್ಶನ್‌ ಪೂಜೆ

7

ಐದು ಕೋಟಿ ಮೌಲ್ಯದ ಕಾರಿನೊಂದಿಗೆ ಚಾಮುಂಡೇಶ್ವರಿಗೆ ದರ್ಶನ್‌ ಪೂಜೆ

Published:
Updated:
ಐದು ಕೋಟಿ ಮೌಲ್ಯದ ಕಾರಿನೊಂದಿಗೆ ಚಾಮುಂಡೇಶ್ವರಿಗೆ ದರ್ಶನ್‌ ಪೂಜೆ

ಮೈಸೂರು: ಚಿತ್ರನಟ ದರ್ಶನ್‌ ಅವರು ಮಂಗಳವಾರ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇತ್ತೀಚೆಗೆ ಖರೀದಿಸಿದ್ದ ಸುಮಾರು

₹ 5 ಕೋಟಿ ಮೌಲ್ಯದ ಲಾಂಬೊರ್ಗಿನಿ ಕಾರು ಚಾಲನೆ ಮಾಡಿಕೊಂಡು ಬೆಟ್ಟಕ್ಕೆ ಬಂದಿದ್ದ ಅವರು ಕಾರಿಗೂ ಪೂಜೆ ಮಾಡಿಸಿದರು.

ದರ್ಶನ್‌ ಚಾಮುಂಡಿಬೆಟ್ಟಕ್ಕೆ ಬಂದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರನ್ನು ನೋಡಲು ಮತ್ತು ಫೋಟೊ ತೆಗೆಯಲು ಸಾರ್ವಜನಿಕರು ಮುಗಿಬಿದ್ದರು. ಕೆಲವರು ಸೆಲ್ಫಿ ತೆಗೆದುಕೊಂದು ಸಂತಸಪಟ್ಟರು.

ಗೆಳೆಯರ ಜತೆ ಸಂಕ್ರಾಂತಿ ಹಬ್ಬ ಆಚರಿಸಲು ಸೋಮವಾರ ಮೈಸೂರಿನ ಹೊರವಲಯದಲ್ಲಿರುವ ಫಾರ್ಮ್‌ ಹೌಸ್‌ಗೆ ಬಂದಿದ್ದರು. ಜೋಡೆತ್ತು ಹಿಡಿದು ಕಿಚ್ಚು ಹಾಯಿಸಿ ಸಂಕ್ರಾಂತಿ ಆಚರಿಸಿದ್ದರು. ಮಂಗಳವಾರ ಬೆಳಿಗ್ಗೆ ದೇವಿಯ ದರ್ಶನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry