ಸ್ಕ್ವಾಷ್‌: ಘೋಷಾಲ್‌ಗೆ ಅಗ್ರ ಶ್ರೇಯಾಂಕ

7

ಸ್ಕ್ವಾಷ್‌: ಘೋಷಾಲ್‌ಗೆ ಅಗ್ರ ಶ್ರೇಯಾಂಕ

Published:
Updated:

ಮುಂಬೈ (ಪಿಟಿಐ): ಭಾರತದ ಸೌರವ್ ಘೋಷಾಲ್‌ ಫೆಬ್ರುವರಿ 6ರಿಂದ ಆರಂಭವಾಗಲಿರುವ ವೇದಾಂತ ಇಂಡಿಯನ್‌ ಸ್ಕ್ವಾಷ್‌ ಓಪನ್ ಟೂರ್ನಿಯ ಮೊದಲ ಆವೃತ್ತಿಯಲ್ಲಿ ಆಗ್ರಶ್ರೇಯಾಂಕದಲ್ಲಿ ಆಡಲಿದ್ದಾರೆ.

10 ರಾಷ್ಟ್ರಗಳ 30 ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿ ದ್ದಾರೆ. ಭಾರತ ಸೇರಿದಂತೆ ಈಜಿಪ್ಟ್‌, ಸ್ವಿಟ್ಜರ್‌ಲೆಂಡ್‌, ಫ್ರಾನ್ಸ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಸ್ಕಾಟ್ಲೆಂಡ್‌, ಮಲೇಷ್ಯಾ, ಕುವೈತ್‌ ತಂಡಗಳ ಆಟಗಾರರು ಆಡಲಿದ್ದಾರೆ.

ಘೋಷಾಲ್ ವಿಶ್ವ ರ‍್ಯಾಂಕಿಂಗ್‌ ನಲ್ಲಿ 16ನೇ ಸ್ಥಾನ ಹೊಂದಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ಆಟಗಾರ ನಿಕೊಲಸ್ ಮುಲ್ಲರ್‌ ಎರಡನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಸ್ಕಾಟ್ಲೆಂಡ್‌ನ ಗ್ರೆಗ್‌ ಲೊಬ್ಬನ್ ಮೂರನೇ ಶ್ರೇಯಾಂಕದೊಂದಿಗೆ ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry