ವಿರಾಟ್‌ ಕೊಹ್ಲಿಗೆ ದಂಡ

7

ವಿರಾಟ್‌ ಕೊಹ್ಲಿಗೆ ದಂಡ

Published:
Updated:

ಸೆಂಚೂರಿಯನ್‌ (ಎಎಫ್‌ಪಿ): ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ(ಐಸಿಸಿ) ನಿಯಮಗಳನ್ನು ಉಲ್ಲಂಘಿಸಿದ ಭಾರತ ತಂಡದ ನಾಯಕ

ವಿರಾಟ್‌ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇಕಡ 25 ರಷ್ಟು ದಂಡ ವಿಧಿಸಲಾಗಿದೆ.

ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದ ವೇಳೆ  ಅಂಗಳದ ಅಂಪೈರ್‌ ಮೈಕಲ್‌ ಗೌಗ್‌ ಬಳಿ ಹೋಗಿದ್ದ ಕೊಹ್ಲಿ, ಔಟ್‌ ಫೀಲ್ಡ್‌ ಒದ್ದೆಯಾಗಿರುವ ಕಾರಣ ಚೆಂಡು ನೆನೆದಿದೆ ಎಂದು ಅದನ್ನು ಕೋಪದಿಂದ ನೆಲಕ್ಕೆ ಬಿಸಾಕಿದ್ದರು.

ಕೊಹ್ಲಿಯ ವರ್ತನೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದ್ದರಿಂದ ಪಂದ್ಯದ ರೆಫರಿ ಕ್ರಿಸ್‌ ಬ್ರಾಡ್‌ ದಂಡ ವಿಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry