ರಾಜ್ಯ ತಂಡ ಪ್ರಕಟ

7

ರಾಜ್ಯ ತಂಡ ಪ್ರಕಟ

Published:
Updated:

ಬೆಂಗಳೂರು: ಆರ್‌.ವಿನಯ್ ಕುಮಾರ್ ಸಾರಥ್ಯದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಗಾಗಿ ಮಂಗಳವಾರ ರಾಜ್ಯ ತಂಡವನ್ನು ಪ್ರಕಟಿಸಲಾಗಿದೆ.

ಕೋಲ್ಕತ್ತದಲ್ಲಿ ಜನವರಿ 21ರಿಂದ 27ರವರೆಗೆ ಸೂಪರ್ ಲೀಗ್ ಹಂತದ ಪಂದ್ಯಗಳು ನಡೆಯಲಿವೆ.  ದಕ್ಷಿಣ ವಲಯ ಹಂತದಲ್ಲಿ ಕರ್ನಾಟಕ ತಂಡ 16 ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನ ಪಡೆಯುವ ಮೂಲಕ ಸೂಪರ್ ಲೀಗ್‌ಗೆ ಅರ್ಹತೆ ಪಡೆದುಕೊಂಡಿತ್ತು. ಕೊನೆಯ ಪಂದ್ಯದಲ್ಲಿ ಕೇರಳ ಎದುರು 20 ರನ್‌ಗಳಿಂದ ಗೆದ್ದಿತ್ತು.

ತಂಡ ಇಂತಿದೆ: ಆರ್‌.ವಿನಯ್‌ ಕುಮಾರ್‌ (ನಾಯಕ), ಮಯಂಕ್‌ ಅಗರವಾಲ್‌, ಕರುಣ್ ನಾಯರ್‌ (ಉಪ ನಾಯಕ), ಆರ್‌.ಸಮರ್ಥ್‌, ಸ್ಟುವರ್ಟ್‌ ಬಿನ್ನಿ, ಸಿ.ಎಮ್‌.ಗೌತಮ್‌, ಕೆ.ಗೌತಮ್‌, ಶ್ರೇಯಸ್ ಗೋಪಾಲ್‌, ಎ.ಮಿಥುನ್‌, ಎಸ್‌.ಅರವಿಂದ್‌, ಪ್ರವೀಣ್‌ ದುಬೆ, ಜೆ.ಸುಚಿತ್‌, ಅನಿವೃದ್ ಜೋಷಿ, ಪ್ರಸಿದ್ಧ ಎಮ್‌.ಕೃಷ್ಣ, ಬಿ.ಆರ್‌.ಶರತ್‌, ಪವನ್ ದೇಶ್‌ಪಾಂಡೆ. ಪಿ.ವಿ ಶಶಿಕಾಂತ್ (ಕೋಚ್‌), ಬಿ.ಸಿದ್ದರಾಮು (ಮ್ಯಾನೇಜರ್‌), ಪ್ರಶಾಂತ್ ಪೂಜಾರ್ (ಟ್ರೇನರ್‌).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry