ಎಚ್‌ಪಿಎಲ್‌ ಪಂದ್ಯದಲ್ಲಿ ರನ್‌ ಹೊಳೆ

7

ಎಚ್‌ಪಿಎಲ್‌ ಪಂದ್ಯದಲ್ಲಿ ರನ್‌ ಹೊಳೆ

Published:
Updated:
ಎಚ್‌ಪಿಎಲ್‌ ಪಂದ್ಯದಲ್ಲಿ ರನ್‌ ಹೊಳೆ

‌ಹುಬ್ಬಳ್ಳಿ: ಧಾರವಾಡದ ಸ್ವರ್ಣ ಸ್ಟ್ರೈಕರ್ಸ್‌ ಮತ್ತು ಎನ್‌.ಕೆ. ವಾರಿ ಯರ್ಸ್ ತಂಡಗಳ  ನಡುವೆ ಹೊನಲು ಬೆಳಕಿನಲ್ಲಿ ಮಂಗಳವಾರ ನಡೆದ ಎಚ್‌ಪಿಎಲ್‌ ಕ್ರಿಕೆಟ್‌ ಪಂದ್ಯ ದಲ್ಲಿ ರನ್‌ ಹೊಳೆ ಹರಿಯಿತು. ಅಂತಿಮವಾಗಿ ಸ್ಟ್ರೈಕರ್ಸ್‌ತಂಡ 12 ರನ್‌ಗಳ ರೋಚಕ ಗೆಲುವು ಪಡೆಯಿತು.

ರಾಜನಗರದಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸ್ವರ್ಣ ಸ್ಟ್ರೈಕರ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತು. ಸವಾಲಿನ ಗುರಿ ಮುಟ್ಟಲು ದಿಟ್ಟ ಹೋರಾಟ ಮಾಡಿದ ವಾರಿಯರ್ಸ್ ಬಳಗ 6 ವಿಕೆಟ್‌ ನಷ್ಟಕ್ಕೆ 193 ರನ್‌ ಕಲೆ ಹಾಕಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.

ಸ್ಟ್ರೈಕರ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ ಹೊನ್ನಾ ವರ (83, 36ಎಸೆತ, 9 ಬೌಂಡರಿ, 5 ಸಿಕ್ಸರ್‌) ಗಳಿಸಿ ಉತ್ತಮ ಮೊತ್ತಕ್ಕೆ ಕಾರಣರಾದರು. ಪರೀಕ್ಷಿತ್‌ ಶೆಟ್ಟಿ (92, 48 ಎಸೆತ, 8 ಬೌಂಡರಿ, 6 ಸಿಕ್ಸರ್‌) ಅಮೋಘ ಬ್ಯಾಟಿಂಗ್‌ನಿಂದ ವಾರಿಯರ್ಸ್ ತಂಡಕ್ಕೆ ಕಠಿಣ ಪೈಪೋಟಿ ನೀಡಲು ಸಾಧ್ಯವಾಯಿತು.

ಇನ್ನೊಂದು ಪಂದ್ಯದಲ್ಲಿ ಶಿರಸಿಯ ಟಿ.ಎಸ್‌.ಎಸ್‌. ಟೈಗರ್ಸ್ ಎದುರು ಹುಬ್ಬಳ್ಳಿಯ ಸ್ಕೈಟೌನ್‌ ಬ್ಯಾಷರ್ಸ್‌ 7 ವಿಕೆಟ್‌ಗಳ ಜಯ ಸಾಧಿಸಿತು. ಟೈಗರ್ಸ್‌ ಮೊದಲು ಬ್ಯಾಟ್‌ ಮಾಡಿ 117 ರನ್ ಗಳಿಸಿತ್ತು. ಈ ಗುರಿಯನ್ನು ಬ್ಯಾಷರ್ಸ್‌ 16.1 ಓವರ್‌ಗಳಲ್ಲಿ ಮುಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry