ಇಂದಿನಿಂದ ಅಂತರ ವಿ.ವಿ ಕೊಕ್ಕೊ ಟೂರ್ನಿ

7

ಇಂದಿನಿಂದ ಅಂತರ ವಿ.ವಿ ಕೊಕ್ಕೊ ಟೂರ್ನಿ

Published:
Updated:

ಮೈಸೂರು: ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಕೊಕ್ಕೊ ಟೂರ್ನಿ ಮತ್ತು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಕೊಕ್ಕೊ ಟೂರ್ನಿಗಳು ಜನವರಿ 17 ರಿಂದ 24ರವರೆಗೆ ಮೈಸೂರು ವಿಶ್ವವಿದ್ಯಾಲಯದ ಆತಿಥ್ಯದಲ್ಲಿ ನಡೆಯಲಿವೆ.

ದಕ್ಷಿಣ ವಲಯ ಟೂರ್ನಿಯನ್ನು 17 ರಿಂದ 20ರವರೆಗೆ ಆಯೋಜಿಸಲಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿಯ 62 ವಿ.ವಿ.ಗಳ ತಂಡಗಳು ಪಾಲ್ಗೊಳ್ಳಲಿವೆ. ಅಖಿಲ ಭಾರತ ಟೂರ್ನಿ ಜ.22 ರಿಂದ 24ರವರೆಗೆ ನಡೆಯಲಿದ್ದು, 16 ತಂಡಗಳು ಪೈಪೋಟಿ ನಡೆಸಲಿವೆ.

ಎರಡೂ ಟೂರ್ನಿಗಳಲ್ಲಿ ಒಟ್ಟು 950ಕ್ಕೂ ಅಧಿಕ ಆಟಗಾರರು ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ವಲಯ ಟೂರ್ನಿಯಲ್ಲಿ ಕಳೆದ ಬಾರಿ ಮಂಗ ಳೂರು ವಿ.ವಿ. ಚಾಂಪಿಯನ್ ಆಗಿತ್ತು. ಕುವೆಂಪು ವಿ.ವಿ.,ಆತಿಥೇಯ ಮೈಸೂರು ವಿ.ವಿ. ಮತ್ತು ಕೇರಳದ ಕಲ್ಲಿಕೋಟೆ ವಿ.ವಿ. ತಂಡಗಳು ಕ್ರಮ ವಾಗಿ ಎರಡರಿಂದ ನಾಲ್ಕರವರೆಗಿನ ಸ್ಥಾನಗಳನ್ನು ಪಡೆದುಕೊಂಡಿದ್ದವು.

ಈ ನಾಲ್ಕು ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ ಲೀಗ್‌ನಲ್ಲಿ ಆಡಲಿವೆ. ಇನ್ನುಳಿದ 58 ತಂಡಗಳು ನಾಕೌಟ್ ಮಾದರಿಯ ಪಂದ್ಯಗಳನ್ನಾಡಲಿದ್ದು,

ನಾಲ್ಕು ತಂಡಗಳು ಕ್ವಾರ್ಟರ್‌ ಫೈನಲ್‌ ಲೀಗ್‌ ಪ್ರವೇಶಿಸಲಿವೆ. ಕ್ವಾರ್ಟರ್‌ ಫೈನಲ್‌ ಹಂತದಲ್ಲಿ ಲೀಗ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು, ಮೊದಲ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಅಖಿಲ ಭಾರತ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry