ನ್ಯೂಜಿಲೆಂಡ್‌ಗೆ ಜಯ

7

ನ್ಯೂಜಿಲೆಂಡ್‌ಗೆ ಜಯ

Published:
Updated:

ಹ್ಯಾಮಿಲ್ಟನ್ (ಎಎಫ್‌ಪಿ): ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ (ಔಟಾಗದೆ 74, 40ಎ, 7ಬೌಂ, 5ಸಿ) ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನದ ಎದುರಿನ ನಾಲ್ಕನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 4–0ರ ಮುನ್ನಡೆ ತನ್ನದಾಗಿಸಿಕೊಂಡಿದೆ.

ಸೆಡನ್‌ ಪಾರ್ಕ್‌ನಲ್ಲಿ ಮಂಗಳವಾರ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 262ರನ್‌ ಕಲೆಹಾಕಿತು. ಸವಾಲಿನ ಗುರಿಯನ್ನು ಕಿವೀಸ್‌ ನಾಡಿನ ತಂಡ 45.5 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 262 (ಫಖ್ರ್ ಜಮಾನ್‌ 54, ಹ್ಯಾರಿಸ್‌ ಸೋಹೈಲ್‌ 50, ಮಹಮ್ಮದ್‌ ಹಫೀಜ್‌ 81, ಸರ್ಫರಾಜ್‌ ಅಹ್ಮದ್‌ 51; ಟಿಮ್‌ ಸೌಥಿ 44ಕ್ಕೆ3, ಟ್ರೆಂಟ್‌ ಬೌಲ್ಟ್‌ 73ಕ್ಕೆ1, ಕೇನ್‌ ವಿಲಿಯಮ್ಸನ್‌ 32ಕ್ಕೆ2, ಮಿಷೆಲ್‌ ಸ್ಯಾಂಟನರ್‌ 43ಕ್ಕೆ1).

ನ್ಯೂಜಿಲೆಂಡ್‌: 45.5 ಓವರ್‌ಗಳಲ್ಲಿ 5 ವಿಕೆಟ್‌ಗೆ 263 (ಮಾರ್ಟಿನ್‌ ಗಪ್ಟಿಲ್‌ 31, ಕಾಲಿನ್‌ ಮನ್ರೊ 56, ಕೇನ್‌ ವಿಲಿಯಮ್ಸನ್‌ 32, ಹೆನ್ರಿ ನಿಕೊಲ್ಸ್‌ ಔಟಾಗದೆ 52, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಔಟಾಗದೆ 74; ರುಮ್ಮನ್‌ ರಯೀಸ್‌ 59ಕ್ಕೆ1, ಶಾದಬ್‌ ಖಾನ್‌ 42ಕ್ಕೆ3, ಹ್ಯಾರಿಸ್‌ ಸೋಹೈಲ್‌ 29ಕ್ಕೆ1).

ಫಲಿತಾಂಶ: ನ್ಯೂಜಿಲೆಂಡ್‌ಗೆ 5 ವಿಕೆಟ್‌ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 4–0 ಮುನ್ನಡೆ.

ಪಂದ್ಯ ಶ್ರೇಷ್ಠ: ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry