ಕ್ರಿಕೆಟ್: ಫೈನಲ್‌ಗೆ ಸೇಂಟ್ ಪಾಲ್ಸ್ ಶಾಲೆ

7

ಕ್ರಿಕೆಟ್: ಫೈನಲ್‌ಗೆ ಸೇಂಟ್ ಪಾಲ್ಸ್ ಶಾಲೆ

Published:
Updated:

ಬೆಂಗಳೂರು: ರಿಶಿಲ್‌ (105) ಅವರ ಶತಕದ ನೆರವಿನಿಂದ ಸೇಂಟ್ ಪಾಲ್ಸ್ ಇಂಗ್ಲಿಷ್ ಶಾಲೆ ತಂಡ ಬಿಟಿಆರ್ ಕಪ್‌ಗಾಗಿ ಇಲ್ಲಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು1ರ ಕೆಎಸ್‌ಸಿಎ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಸೆಮಿಫೈನಲ್ ಪಂದ್ಯದಲ್ಲಿ ಸೇಂಟ್ ಪಾಲ್ಸ್‌ ಶಾಲೆ 14ರನ್‌ಗಳಿಂದ ಹೆಡ್‌ ಸ್ಟಾರ್ಟ್‌ ಎಜುಕೇಷನ್ ಅಕಾಡೆಮಿ ಎದುರು ಗೆದ್ದಿದೆ.

ಸಂಕ್ಷಿಪ್ತ ಸ್ಕೋರು: ಸೇಂಟ್ ಪಾಲ್ಸ್ ಇಂಗ್ಲಿಷ್ ಶಾಲೆ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 266 (ರಿತೇಶ್‌ 32, ರಿಶಿಲ್‌ 105, ಶಮಂತ್‌ 29, ಉಸಫ್‌ 30; ಎಮ್‌.ಮಯಂಕ್‌ 38ಕ್ಕೆ3, ಎಲ್‌.ನಿಹಾಲ್‌ 51ಕ್ಕೆ2). ಹೆಡ್ ಸ್ಟಾರ್ಟ್ ಎಜುಕೇಷನ್ ಅಕಾಡೆಮಿ: 46.4 ಓವರ್‌ಗಳಲ್ಲಿ 252 (ಎಲ್‌.ನಿಹಾಲ್‌ 44, ಎಮ್‌.ದಿಶನ್‌ 49, ಬಿ.ಕೃಶಿವ್‌ 48, ಆರುಷ್‌ 22, ಎಚ್‌.ಮಯಂಕ್‌ 28; ರಿಶಿಲ್‌ 58ಕ್ಕೆ2, ಸಮಂತ್‌ ಕಾರ್ತಿಕ್‌ 37ಕ್ಕೆ3). ಫಲಿತಾಂಶ: ಸೇಂಟ್ ಪಾಲ್ಸ್ ಇಂಗ್ಲಿಷ್‌ ಶಾಲೆಗೆ 14 ರನ್‌ಗಳ ಜಯ. ಹೋಲಿ ಸೇಂಟ್‌ ಹೈಸ್ಕೂಲ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 329 (ಸುಧಾನ್ವ 33, ವಿಕ್ರಂ ಕುಮಾರ್‌ 126, ಶ್ರೀ ಚೌಧರಿ 27, ವಿ.ಎಚ್‌.ಅಮೇ 26, ವರುಣ್‌ 41, ಶಶಿ ಕುಮಾರ್‌ 24, ಜೋಹನ್ನಾ ಜೋಸೆಫ್‌ 69ಕ್ಕೆ4). ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಶಾಲೆ: 40.2 ಓವರ್‌ಗಳಲ್ಲಿ 163 (ಸಮಿತ್ ದ್ರಾವಿಡ್‌ 27, ಅಕ್ಷನ್ ಶೆಟ್ಟಿ 37, ಧ್ರವ್ ಕುಮಾರ್ 20; ವಿ.ಎಚ್.ಅಮೇ 32ಕ್ಕೆ3, ಆರ್.ದರ್ಶನ್‌ 24ಕ್ಕೆ4). ಫಲಿತಾಂಶ: ಹೋಲಿ ಸೇಂಟ್ ಪ್ರೌಢ ಶಾಲೆಗೆ 166ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry