ಬಡ ಹೃದ್ರೋಗಿಗಳಿಗೆ ಸ್ಟೆಂಟ್‌ ಅಳವಡಿಕೆ ಬಿಬಿಎಂಪಿ ಒಪ್ಪಂದ

6

ಬಡ ಹೃದ್ರೋಗಿಗಳಿಗೆ ಸ್ಟೆಂಟ್‌ ಅಳವಡಿಕೆ ಬಿಬಿಎಂಪಿ ಒಪ್ಪಂದ

Published:
Updated:

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವ ಬಡರೋಗಿಗಳಿಗೆ ಉಚಿತವಾಗಿ ಸ್ಟೆಂಟ್‌ ಅಳವಡಿಸಲು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ.

ಪ್ರತಿ ವಾರ್ಡ್‌ನಿಂದ 2–3 ಫಲಾನುಭವಿಗಳಿಗೆ ಈ ಎರಡು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸು

ವಂತೆ ಎಲ್ಲ ವಾರ್ಡ್‌ ಸದಸ್ಯರಿಗೆ ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ. ಒಂದು ಕರೋನರಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ₹70 ಸಾವಿರ ಹಾಗೂ ಎರಡು ಕರೋನರಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ₹90 ಸಾವಿರ ವೆಚ್ಚ ಭರಿಸಲಾಗುತ್ತದೆ. ಶಿಫಾರಸು ಮಾಡಿದ ರೋಗಿಗೆ ಮೂರನೇ ಸ್ಟೆಂಟ್‌ ಹಾಗೂ ಹೆಚ್ಚುವರಿ ಚಿಕಿತ್ಸೆ ಅಗತ್ಯ ಇದ್ದಲ್ಲಿ, ಅದರ ವೆಚ್ಚವನ್ನು ರೋಗಿಗಳೇ ಭರಿಸಬೇಕು ಎಂದು ತಿಳಿಸಿದ್ದಾರೆ.

ಯಾರು ಅರ್ಹರು: ಅಶಕ್ತ ವೃದ್ಧರು, ಆರ್ಥಿಕವಾಗಿ ಹಿಂದುಳಿದ ದುರ್ಬಲರು, ಬೀದಿಯಲ್ಲಿ ಕಸ ಆಯುವವರು, ರಸ್ತೆ ಬದಿ ವ್ಯಾಪಾರ ಮಾಡುವವರು, ಅನಾಥ, ನಿರ್ಗತಿಕರು ಹಾಗೂ ಕೊಳಚೆ ಪ್ರದೇಶದ ನಿವಾಸಿಗಳು ಅರ್ಹರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry