ಕೆಪಿಸಿಸಿ: ಜಾತಿವಾರು ಜನಸಂಖ್ಯೆ ಸಂಗ್ರಹ

7

ಕೆಪಿಸಿಸಿ: ಜಾತಿವಾರು ಜನಸಂಖ್ಯೆ ಸಂಗ್ರಹ

Published:
Updated:

ಬೆಂಗಳೂರು:ಪ್ರತಿ ವಿಧಾನಸಭಾ ಕ್ಷೇತ್ರದ ಜಾತಿವಾರು ಜನಸಂಖ್ಯೆ ಮಾಹಿತಿ ಸಂಗ್ರಹಿಸಲು ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಮುಂದಾಗಿದೆ.

ಚುನಾವಣೆ ತಂತ್ರಗಾರಿಕೆ ರೂಪಿಸುವ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿದೆ.

‘ಇತ್ತೀಚೆಗೆ ಚುನಾವಣೆಗಳಲ್ಲಿ ಜಾತಿ ಪ್ರಭಾವ ಹೆಚ್ಚುತ್ತಿದೆ. ಹೀಗಾಗಿ ಉಸ್ತುವಾರಿ ವಹಿಸಿರುವ ಜಿಲ್ಲೆಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಜಾತಿವಾರು ಜನಸಂಖ್ಯೆಯ ವಿವರ ಸಂಗ್ರಹಿಸಿ ಕೆಪಿಸಿಸಿಗೆ ತಲುಪಿಸಬೇಕು’ ಎಂದು ಅಧ್ಯಕ್ಷ ಪರಮೇಶ್ವರ ಸೂಚಿಸಿದ್ದಾರೆ.

ಪದಾಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಕೆಪಿಸಿಸಿ ಬಿಡುಗಡೆ ಮಾಡಿದೆ. ‘ವಸ್ತುಸ್ಥಿತಿ ಅರಿಯಲು ತಕ್ಷಣಕ್ಕೆ  ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ವರದಿ ನೀಡುವುದು, ಕೆಪಿಸಿಸಿಯಿಂದ ಆಚರಿಸಲಾಗುವ ಎಲ್ಲ ವಾರ್ಷಿಕ ಕಾರ್ಯಕ್ರಮಗಳನ್ನು ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಮಾಡಬೇಕು, ವಂದೇ ಮಾತರಂ ಕಡ್ಡಾಯವಾಗಿ ಹಾಡಬೇಕು, ಸ್ಥಳೀಯ ನಾಯಕರಲ್ಲಿ ಇರಬಹುದಾದ ಭಿನ್ನಾಭಿಪ್ರಾಯ ನಿವಾರಣೆಗೆ ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡ

ಬೇಕು, ಸಾಧ್ಯವಾಗದಿದ್ದಲ್ಲಿ ತಕ್ಷಣ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರಬೇಕು’ ಎಂದು ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry