ಸ್ವಾಮೀಜಿ ವಿರುದ್ಧ ಹೊರಟ್ಟಿ ವಾಗ್ದಾಳಿ

7

ಸ್ವಾಮೀಜಿ ವಿರುದ್ಧ ಹೊರಟ್ಟಿ ವಾಗ್ದಾಳಿ

Published:
Updated:

ಸುತ್ತೂರು (ಮೈಸೂರು): ‘ಮಠಾಧೀಶರು ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ನಾನು ಧರ್ಮ ಒಡೆಯುವ ಕೆಲಸ ಮಾಡಿಲ್ಲ. ನೀವೆಲ್ಲ ಸರಿ ಇದ್ದರೆ ಸಮಾಜಕ್ಕೆ ಇಂದು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಕಿಡಿಕಾರಿದರು.

ಸುತ್ತೂರು ಜಾತ್ರೆ ಅಂಗವಾಗಿ ಮಂಗಳವಾರ ನಡೆದ ಕೃಷಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ರಾಜಕಾರಣಿಗಳು ತಪ್ಪು ಮಾಡಿದರೆ ಕಿವಿಹಿಂಡಿ ಬುದ್ಧಿ ಹೇಳಿ. ಅದನ್ನು ಬಿಟ್ಟು ರಾಜಕಾರಣಿಗಳ ಧಾಟಿಯಲ್ಲೇ ಟೀಕೆ ಮಾಡಿದರೆ ನಮಗೂ ನಿಮಗೂ ವ್ಯತ್ಯಾಸ ಇಲ್ಲದಂತಾಗುತ್ತದೆ. ನಮ್ಮ ಕೆಲಸವನ್ನು ನೀವು ಮಾಡಿದರೆ ನಮಗೂ ನಿಮಗೂ ಅಂತರವೇನಿದೆ?’ ಎಂದು ಖಾರವಾಗಿ ಪ್ರಶ್ನಿಸಿದರು.

‘ರಾಜ್ಯದಲ್ಲಿ ಶೇ 10ರಿಂದ 15ರಷ್ಟು ಮಠಾಧೀಶರನ್ನು ಬಿಟ್ಟರೆ ಮಿಕ್ಕವರೆಲ್ಲ ರಾಜಕಾರಣಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಒಬ್ಬೊಬ್ಬ ಸ್ವಾಮೀಜಿಯೂ ಒಬ್ಬೊಬ್ಬ ರಾಜಕಾರಣಿಯನ್ನು ಅನುಸರಿಸುತ್ತಾರೆ. ಇನ್ನು ಕೆಲವು ಸ್ವಾಮಿಗಳು ಯಾವ ರಾಜಕಾರಣಿ ಎಷ್ಟು ದುಡ್ಡು ಕೊಡುತ್ತಾನೆ ಎಂದು ಕೇಳುವಂತಾಗಿಬಿಟ್ಟಿದ್ದಾರೆ’ ಎಂದು ಅವರು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry