ರವಿ ಪೂಜಾರಿಯಿಂದ ಬೆದರಿಕೆ ಕರೆ; ಶಾಸಕ ಸುರೇಶ್‌ ಬಾಬು

7

ರವಿ ಪೂಜಾರಿಯಿಂದ ಬೆದರಿಕೆ ಕರೆ; ಶಾಸಕ ಸುರೇಶ್‌ ಬಾಬು

Published:
Updated:

ಚಿಕ್ಕನಾಯಕನಹಳ್ಳಿ: ‘ಭೂಗತ ಪಾತಕಿ ರವಿ ಪೂಜಾರಿ ನನ್ನ ಮೊಬೈಲ್‌ಗೆ ಕರೆ ಮಾಡಿ, ಬಳಿಕ ಸಂದೇಶ ಕಳುಹಿಸಿ ಬೆದರಿಕೆ ಹಾಕಿರುವುದು ನಿಜ’ ಎಂದು ಶಾಸಕ ಸಿ.ಬಿ.ಸುರೇಶ್‌ ಬಾಬು ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ತಿಂಗಳು 27ರಂದು ನನ್ನ ಮೊಬೈಲ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ತನ್ನನ್ನು ರವಿಪೂಜಾರಿ ಎಂದು ಹೇಳಿಕೊಂಡರು. ₹ 10 ಕೋಟಿ ರೂಪಾಯಿ ನೀಡಬೇಕು. ಕೊಡದಿದ್ದರೆ ನೀನು ಮತ್ತು ನಿನ್ನ ಕುಟುಂಬದವರು ಬದುಕಿ ಉಳಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದರು’ ಎಂದು ತಿಳಿಸಿದರು.

‘ಡಿ. 28ರ ಬೆಳಿಗ್ಗೆ ಅದೇ ನಂಬರ್‌ನಿಂದ ಕರೆ ಮಾಡಿ ‘ನಾನು ಮಾಫಿಯಾ ಡಾನ್‌ ರವಿ ಪೂಜಾರಿ. ನನಗೆ ₹ 10 ಕೋಟಿ ನೀಡಬೇಕು. ಈ ಕುರಿತು ಪೊಲೀಸರಿಗೆ ಅಥವಾ ಮಾಧ್ಯಮದವರಿಗೆ ತಿಳಿಸಿದರೆ ನಿಮ್ಮ ಪ್ರಾಣಕ್ಕೆ ಸಂಚಕಾರ’ ಎಂದು ಇಂಗ್ಲಿಷ್‌ನಲ್ಲಿ ಸಂದೇಶ ರವಾನಿಸಿದ್ದರು. ಈ ಬಗ್ಗೆ ಉಪ್ಪಾರಪೇಟೆ ಡಿವೈಎಸ್‌ಪಿ ಬಳಿ ನೇರವಾಗಿ ದೂರು ದಾಖಲಿಸಿದ್ದೇನೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry